ವ್ಯಾಸ ಸಂದರ್ಶನ
ಸಂಪ ಕೇಳಿದ್ದು; ವ್ಯಾಸ ಹೇಳಿದ್ದು
ಒಬ್ಬ ವ್ಯಕ್ತಿ ಒಂದು ಬದುಕಿನಲ್ಲಿ ಏನೆಲ್ಲ ಮಾಡಬಹುದು? ಎಂದು ಕೇಳಿದರೆ ವ್ಯಾಸರನ್ನು ನೋಡಿ ಎನ್ನುತ್ತೇನೆ. ಅಷ್ಟು ಕೆಲಸ ಅವರದ್ದು! ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು ಎಲ್ಲರಿಗೂ ಬೇಕಾಗುವಂತೆ ಆದವರು ಅವರು. ಜಗತ್ತು ಅವರನ್ನು ಕರೆದು ಅನುಗ್ರಹ ಮಾಡಿಸಿಕೊಂಡಿದ್ದಲ್ಲ; ಅವರೇ ಹೋಗಿ ಹೋಗಿ ಒಳಿತು ಮಾಡಿದವರು. ಇಷ್ಟಾರು ರಚನೆಗೆ ಅವರಿಗೆ ಯಾರೂ ಸೂಚಿಸಿದ್ದಲ್ಲ; ಅವರೇ ಯೋಜಿಸಿ ಬರೆದರು. ‘ಒಳಿತು ಮಾಡುವುದು ಕರ್ತವ್ಯ; ಮಾಡುತ್ತಾ ಸಾಗುತ್ತೇನೆ’ ಎಂಬ ವಿಶ್ವಹಿತದ ಭಾವ ಅವರದ್ದು. ವ್ಯಾಸರೊಡನೆಯ ಒಂದು ಸಂವಾದ ಇಲ್ಲಿದೆ.

ಕುರುಕ್ಷೇತ್ರ
ಕ್ಷಣ ಕ್ಷಣದ ಮಾಹಿತಿ
ಹದಿನೆಂಟು ದಿನದ ಯುದ್ಧ. ಹದಿನೆಂಟು ಅಕ್ಷಹಿಣೀ ಸೈನ್ಯ. ಅತಿರಥ ಮಹಾರಥರ ಘನೋಪಸ್ಥಿತಿ. ಐದು ತಲೆಮಾರಿನ ಯೋಧರ ಸಮ್ಮಿಲನ. ಒಟ್ಟು ಸತ್ತವರು ಅರವತ್ತೆರಡು ಕೋಟಿ ಜನ. ಆನೆ-ಕುದುರೆಗಳ ಲೆಕ್ಕವಿಲ್ಲ. ಕೊನೆಗೆ ಉಳಿದಿದ್ದು ಬೆರಳೆಣಿಕೆಯ ಜನರಷ್ಟೇ. ಇದು ಕುರುಕ್ಷೇತ್ರದ ಯುದ್ಧದ ಕಥೆ. ಧರ್ಮಕ್ಷೇತ್ರದಲ್ಲಿ ಧರ್ಮರಕ್ಷೆಗಾಗಿ ನಡೆದ ಈ ಮಹಾಯುದ್ಧ ವಾಸ್ತವವಾಗಿ ನಡೆದಿದ್ದು ಹೇಗೆ? ಮಹಾಭಾರತ ವಿವರಿಸುವ ಮಾಹಿತಿಗಳ ಸಂಗಮವೇ ಈ ಕೃತಿ.

ಕುಂತಿ-ಪಾಂಡು
ಅವಘಡವಾದ ಅವಕಾಶಗಳಲ್ಲೇ ಆದರ್ಶ ಮೆರೆದವರು
ಜೀವಂತಿಕೆ, ಕ್ರಿಯಾಶೀಲತೆ, ಮೇಧೆ, ಪ್ರಬುದ್ಧತೆ, ಗಾಂಭೀರ್ಯ, ವಿನಯ, ವಿದ್ಯೆ, ವಿವೇಕ, ತ್ಯಾಗಶೀಲತೆ, ಸಹಿಷ್ಣುತೆ, ಸಮರ್ಪಣೆ, ತಪಸ್ಸು, ಪಶ್ಚಾತ್ತಾಪ, ಸಹಾನುಭೂತಿ, ಸೇವೆ, ಸಾಮರ್ಥ್ಯ, ಕೌಶಲ, ದಾರ್ಢ್ಯ, ಕಷ್ಟ, ನಷ್ಟ, ಸೋಲು, ಗೆಲುವು, ಸವಾಲು, ಸಮೃದ್ಧಿ, ಸೌಂದರ್ಯ, ನೆನಪು, ಕನಸು, ಪ್ರೀತಿ, ವಾತ್ಸಲ್ಯ, ವಿಶ್ವಾಸ, ಓಟ, ನೆಲೆ.
