ಆಚಾರ್ಯ ಚಾಣಕ್ಯ/acharya chanakya
ಚಾಣಕ್ಯ ಎಂದ ತಕ್ಷಣ ನಮ್ಮ ಮನಸ್ಸಿಗೆ ಬರುವುದು ಅವರ ಬುದ್ದಿವಂತಿಕೆ. ಕುಟಿಲ ನೀತಿಗಳಿಗೆ ಅವರು ಪ್ರಸಿದ್ಧರು. ನಮ್ಮಲ್ಲಿ ಕುಟಿಲ ಎಂದರೆ ಕೆಟ್ಟದ್ದು, ವಾಮಮಾರ್ಗಗಳಿಂದ ಕಾರ್ಯಸಾಧನೆ ಮಾಡುವವರು ಎನ್ನುವ ಭಾವನೆ ಬೇರೂರಿದೆ. ಅದು ಪೂರ್ಣ ಸತ್ಯವಲ್ಲ. ಇಂದಿನ ದಿನಗಳಲ್ಲಿ ನಡೆಯುತ್ತಿರುವ ಜಿಯೋಪಾಲಿಟಿಕ್ಸ್ ಗಮನಿಸುವರಿಗೆ ಇದು ಹೆಚ್ಚು ಅರ್ಥವಾಗುತ್ತದೆ. ಕೆಲವು ನೀತಿಗಳನ್ನು ರಾಜ್ಯದ ಉಳಿವಿಗಾಗಿ, ಜನತೆಯ ಉಳಿವಿಗಾಗಿ ಅನುಸರಿಸುವುದು ಬಹಳ ಮುಖ್ಯವಾಗುತ್ತದೆ. ಅಂದಿನ ದಿನಗಳಲ್ಲಿ ಚಾಣಕ್ಯ ಬರೆದಿರುವ ಅರ್ಥಶಾಸ್ತ್ರದಲ್ಲಿನ ಉಲ್ಲೇಖಗಳು ಇಂದಿಗೂ ಪ್ರಸ್ತುತವಾಗಿವೆ ಎನ್ನುವುದಕ್ಕೆ ಜಿಯೋಪಾಲಿಟಿಕ್ಸ್ ಉತ್ತಮ ಉದಾಹರಣೆ. ಹಾಗೆಯೇ ಅವರ ರಾಜನೀತಿ, ಧರ್ಮನೀತಿಗಳು ಸಹ ಇಂದಿಗೂ ಪ್ರಸ್ತುತವಾಗಿವೆ.
ಇವು ಮನುಕುಲವಿರುವವರಿಗೂ ಅನ್ವಯವಾಗುತ್ತವೆ. ಆ ನಿಟ್ಟಿನಲ್ಲಿ ಈ ಪುಸ್ತಕ ಆಚಾರ್ಯ ಚಾಣಕ್ಯರ ಬದುಕು ಮತ್ತು ಕೆಲಸಗಳನ್ನು ಇನ್ನಷ್ಟು ತಿಳಿದುಕೊಳ್ಳಲು ಓದುಗರಲ್ಲಿ ಕಿಡಿಯನ್ನು ಖಂಡಿತ ಹಚ್ಚುತ್ತದೆ.
ರಂಗಸ್ವಾಮಿ ಮೂಕನಹಳ್ಳಿ
ಹಣಕಾಸು ಸಲಹೆಗಾರರು
ಮೈಸೂರು