ಆಚಾರ್ಯ ಬೃಹಸ್ಪತಿ/ Acharya bruhaspati
‘ಗುರುವಿನ ಗುಲಾಮನಾಗುವ ತನಕ ಮುಕ್ತಿ ದೊರೆಯದು’ ಎಂಬುದು ಸಾಮಾನ್ಯರಿಗೆ ಮಾತ್ರವಲ್ಲ, ದೇವತೆಗಳಿಗೂ ಎನ್ನುವುದನ್ನು ಅವರಿಗೆ ಬೃಹಸ್ಪತಿ ಎಂಬ ಗುರುಗಳಿದ್ದರು ಎಂಬುದು ತಿಳಿಸುತ್ತದೆ. ಇದು ಸೋಜಿಗದ ವಿಷಯ.
ಗುರು ಎಂಬ ಪದದ ಅರ್ಥ ಸಂಸ್ಕೃತದಲ್ಲಿ ಬೇರೆ ಬೇರೆ ರೀತಿಯಲ್ಲಿ ಇದ್ದರೂ ಅವೆಲ್ಲವನ್ನೂ ಸರಳವಾದ ರೀತಿಯಲ್ಲಿ ಅರ್ಥ ಮಾಡಿಸುವ ಪ್ರಯತ್ನವನ್ನು ಇಲ್ಲಿ ಲೇಖಕರು ಮಾಡಿರುವುದು ಶ್ಲಾಘನೀಯ.
ದೇವತೆಗಳಿಗೆ ಗುರುವಾದ ಬೃಹಸ್ಪತಿ ಗುರುಗಳ ಪರಿಚಯವನ್ನು ವೇದ, ಪುರಾಣ, ಭಾಗವತ, ಜ್ಯೋತಿಷಶಾಸ್ತ್ರ, ದರ್ಶನಗಳಲ್ಲಿ ಇರುವ ಉಲ್ಲೇಖಗಳೊಡನೆ, ಪ್ರಸ್ತುತತೆಯನ್ನೂ ಮೇಳೈಸಿ ಕಟ್ಟಿಕೊಟ್ಟಿರುವ ಸೂರ್ಯನಾರಾಯಣ ನಾಗೇಂದ್ರ ಭಟ್ಟರ ಕಾರ್ಯ ಪ್ರಸ್ತುತ ಮತ್ತು ಅನಿವಾರ್ಯ.
ಗುರುವಿನೆಡೆಗೆ, ಗುರು ಕಾರುಣ್ಯದೆಡೆಗೆ ದಾರಿ ತೋರಿದ ಕಾರಣಕರ್ತರಿಗೆ ಧನ್ಯವಾದಗಳು.
ಡಾ. ಮಾರುತಿ ಎನ್ ಎನ್
ಲೇಖಕ