ದ್ರಾಹ್ಯಾಯಣಾಚಾರ್ಯ / dhrahyayanacharya
ಸನಾತನ ಧರ್ಮದ ನೆಲೆಗಟ್ಟಾದ ವೇದಗಳು ಮಾನವನ ಸಕಲ ವಿಧದ ಉತ್ಕರ್ಷಕ್ಕೆ ಬೇಕಾದ ಹಾದಿಯನ್ನು ಹಾಕಿಕೊಟ್ಟಿದೆ. ಆ ಹಾದಿಯನ್ನು ಕರ್ಮಕಾಂಡದಲ್ಲಿ ವೇದಗಳು ತಿಳಿಸಿವೆ. ಪ್ರಕೃತ ಸಾಮಶಾಖೆಯ ಕರ್ಮಾನುಷ್ಠಾನದ ಸೂತ್ರಗಳನ್ನು ಲೋಕಮುಖಕ್ಕೆ ಕೊಟ್ಟ ದ್ರಾಹ್ಯಾಯಣರ ಬಗ್ಗೆ ಈ ಕೃತಿಯಾಗಿದೆ.
ಅವರ ಪರಿಚಯ ನಮಗೆ ಸಿಗುವುದೇ ಬಹಳ ಕಡಿಮೆಯಾದರೂ ಆರ್ಷಸಾಹಿತ್ಯವನ್ನೆಲ್ಲ ಶೋಧಿಸಿ ಅತ್ಯಂತ ಪರಿಶ್ರಮದಿಂದ ಅವನ್ನೆಲ್ಲ ಕ್ರೋಢೀಕರಿಸಿ ಅವರ ಚರಿತ್ರ ಮತ್ತು ಕೃತಿಗಳ ಸಾರವನ್ನು ಲೇಖಕರು ಭಟ್ಟಿ ಇಳಿಸಿದ್ದಾರೆ. ಆಚಾರ್ಯರೊಬ್ಬರ ಜೀವನ – ಸಾಧನೆಯನ್ನು ಚಂದದ ಸರಳ ಭಾಷೆಯಲ್ಲಿ ಕಟ್ಟಿಕೊಟ್ಟಿದ್ದು ಲೇಖಕರ ಹಿರಿಮೆ.
ಕೀರ್ತಿ ಭಟ್ಟ , ಚುಟ್ಟಿಕೆರೆ.