ಮಹರ್ಷಿ ಕಣ್ವ / Maharshi kanva
 
    ಮಹರ್ಷಿ ಕಣ್ವ
ಎಲ್ಲ ವಿದ್ಯೆಗಳಿಗಿಂತ ಅಧ್ಯಾತ್ಮ ವಿದ್ಯೆ ಮಿಗಿಲು. ಹಾಗಂತ ಈ ವಿದ್ಯೆ ಸುಲಭದ್ದಲ್ಲ. ಸತತ ತಪಸ್ಸಿನ ಸಾಧನೆಯಿಂದ ಈ ‘ಸಿದ್ಧಿ’ ಮಾಡಿಕೊಂಡು ನಮಗೆ  ಸನ್ಮಾರ್ಗ ತೋರಿದವರು ಋಷಿ ಮುನಿಗಳು.
ಅಂಥ ಸಾಧಕ ಮಹಾಪುರುಷರಲ್ಲಿ ‘ಕಣ್ವ’ ಮಹರ್ಷಿಗಳೂ ಒಬ್ಬರು. ಲೌಕಿಕ, ಅಲೌಕಿಕ ಬದುಕಿನ ಜ್ಞಾನ ಹಂಚುತ್ತಲೇ  ಶಿಸ್ತಿನಲ್ಲಿ ಶಿಷ್ಯರನ್ನು ಬೆಳಸಿ ಅವರಲ್ಲಿ ಕರುಣೆಯನ್ನೂ ತುಂಬಿದ ಋಷಿ ರತ್ನರು. ಕಾಳಿದಾಸ ತನ್ನ ಅಭಿಜ್ಞಾನಶಾಕುಂತಲದಲ್ಲಿ  ಕಣ್ವರ ಮಾತೃ ಹೃದಯವನ್ನು ಹೃದಯಂಗಮವಾಗಿ ಚಿತ್ರಿಸಿದ್ದಾನೆ.
ಇಂಥವರ ಕುರಿತು ಬಹುಶ್ರುತ ವಿದ್ವಾಂಸ ಡಾ. ಕೆ.ಎಸ್.ಕಣ್ಣನ್ ಅಪರೂಪದ ಕೃತಿ ನೀಡಿದ್ದಾರೆ. ಶ್ರೀಭಾರತೀ ಪ್ರಕಾಶನವು ಈ ನೆಲದ ಭಾಷೆಯಲ್ಲಿ ಈ ಕೃತಿಯನ್ನು ಒದಗಿಸುವ ಮೂಲಕ ಶತ ಶತಮಾನಕ್ಕೆ ಅನನ್ಯ ಕೊಡುಗೆ ನೀಡಿದೆ.
ಇಂಥ ಕೃತಿಗಳ ಮುದ್ರಣ, ಪುನರ್ಮುದ್ರಣಗಳು ನಮ್ಮ ಇಂದಿನ ಹಾಗೂ ಮುಂದಿನ ತಲೆಮಾರಿಗೆ ನಾವು ಕೊಡಬಹುದಾದ ಕಳಕಳಿಯ ಬಳುವಳಿ.
-ರಾಘವೇಂದ್ರ ಬೆಟ್ಟಕೊಪ್ಪ
ಪತ್ರಕರ್ತ

