ಮಹರ್ಷಿ ಕಪಿಲ / Maharshi kapila

ಇದು ವರ್ತಮಾನದ ಸಮಾಜಕ್ಕೊಂದು ಅಗತ್ಯದ ದಾರಿದೀಪ.
ಕಪಿಲ ಮಹರ್ಷಿಗಳು ಪುರಾಣಗಳೇ ಕೊಂಡಾಡಿದ ಪರಿಪೂರ್ಣ ಜ್ಞಾನಿ.
ಸನಾತನ ಪರಂಪರೆಯ ಸಾರ ಇರುವುದೇ ಸಂತ ಪರಂಪರೆ ಮತ್ತು ಆಧ್ಯಾತ್ಮಿಕತೆಯಲ್ಲಿ. ವಿಧಿ ನಿಷೇಧಗಳ ಇಕ್ಕೆಲಗಳ ಮಧ್ಯದಲ್ಲಿ ಯುಗ ಧರ್ಮದಿಂದ ಮರೆಯಾಗುತ್ತಿರುವ ಆಧ್ಯಾತ್ಮಿಕತೆಯ ಅಪರಿಮಿತ ಅಮೃತತ್ವವನ್ನು ಲೌಕಿಕ ಜೀವನದಲ್ಲಿ ಅಳವಡಿಸಿಕೊಳ್ಳುವುದು ಹೇಗೆ? ನಿಂದ್ಯವಲ್ಲದ ನಡೆಯ ಉಪಾಸನೆ ಹೇಗೆ ಸಾಧ್ಯ? ಘನ ತತ್ತ್ವಗಳ ಸಾಕ್ಷಾತ್ಕಾರದಿಂದ ಆದರ್ಶ ಬದುಕಿನ ನಿರ್ಮಾಣ ಹೇಗೆ ಸಾಧ್ಯ? ಎಂಬಿತ್ಯಾದಿ ಅಮೂಲ್ಯ ಜೀವನ ದರ್ಶನಗಳ ಸಾರವೇ ಪ್ರಸ್ತುತ ಕೃತಿ.
ಪ್ರಕೃತಿ, ಸಂಸ್ಕೃತಿ ಮತ್ತು ವಿಕೃತಿಗಳ ಮಧ್ಯದ ಭಿನ್ನತೆಯ ಆಧ್ಯಾತ್ಮಿಕ ವಿಶ್ಲೇಷಣೆಯನ್ನೇ ಮೂಲ ಧ್ವನಿಯಾಗಿರಿಸಿಕೊಂಡ ಪ್ರಸ್ತುತ ಕೃತಿ ಸಮಾಜಕ್ಕೆ ನಿಜಾರ್ಥದಲ್ಲಿ ದಾರಿ ದೀಪ.
-ಡಾ.ಲಕ್ಷ್ಮೀಶ್ ಸೋಂದಾ
ಇತಿಹಾಸಕಾರರು