ಮಹರ್ಷಿ ಕಶ್ಯಪ/Maharshi kashyapa
ತನ್ನ ಮೂಲದ ಬಗ್ಗೆ, ಜಗದ ಮೂಲದ ಬಗ್ಗೆ ಮನುಷ್ಯನಿಗೆ ಎಂದಿಗೂ ಕುತೂಹಲ. ಅದರ ಬಗ್ಗೆ ವಿಜ್ಞಾನವೂ ಸೇರಿದಂತೆ ಅನೇಕ ಮತಗಳ ಅನೇಕ ಅಭಿಪ್ರಾಯಗಳಿವೆ. ಸನಾತನಧರ್ಮದ ನಿಶ್ಚಯವೆಂದರೆ ಜೀವಸೃಷ್ಟಿ ಪರತತ್ತ್ವದ ಲೀಲೆಯೆಂದು. ಆ ಪರತತ್ತ್ವವು ಮಹರ್ಷಿಕಶ್ಯಪರ ರೂಪ ತಾಳಿ ದಿವಿಯ ದೇವತೆಗಳನ್ನೂ, ಬುವಿಯ ಜೀವಿಗಳನ್ನೂ ಸೃಷ್ಟಿಸಿತು.
ಇಲ್ಲಿ ಕಶ್ಯಪರ ಆವಿರ್ಭಾವ, ಅವರು ನಡೆದ ಹಾದಿ, ಅವರು ಪಟ್ಟ ಕಷ್ಟಗಳನ್ನು ವಿವರಿಸುತ್ತಲೇ ಅವರು ಬೋಧಿಸಿದ ನೀತಿಗಳನ್ನು ಲೇಖಕರು ತಿಳಿಸಿದ್ದಾರೆ. ಹಲವೆಡೆ ಹರಡಿರುವ ಕಶ್ಯಪರ ಜೀವನದ ವೃತ್ತಾಂತವನ್ನು ಸಂಗ್ರಹಿಸಿ ಇಲ್ಲಿ ಸಾರ ಬಡಿಸಿದ್ದಾರೆ.
.ಗಣೇಶ ಕೃಷ್ಣ ಹೆಗಡೆ