ಮಹರ್ಷಿ ಗೌತಮ / Maharshi gówthama
‘ಮಹರ್ಷಿಗೌತಮ’ ಕಿರುಕೃತಿಯನ್ನು ಅವಲೋಕಿಸಿದಾಗ ಹರ್ಷದ ಭಾವವೊಂದು ನಮ್ಮ ಮನದಲ್ಲಿ ಮೂಡುತ್ತದೆ. ಗೋತ್ರಪ್ರವರ್ತಕರಾದ, ಗೋವಿನಷ್ಟು ಪ್ರಶಾಂತ ಮನಸ್ಸಿನವರಾದ, ಸಾತ್ತ್ವಿಕ ಹೃದಯಸಂಪನ್ನರಾದ ಗೌತಮರ ಪರಿಚಯವು ನಮಗಾಗುವುದೇ ಇದಕ್ಕೆ ಕಾರಣ. ಭವಿಷ್ಯದ ರಾಮಾವತಾರವನ್ನು ಮೊದಲೇ ಹೃದಯದಲ್ಲಿ ಸಂದರ್ಶಿಸಿದ ಗೌತಮರ ಅಮರಚರಿತೆಯನ್ನು ಅಕ್ಷರರೂಪದಲ್ಲಿ ಸಹೃದಯ ಸಮಾಜಕ್ಕೆ ತೆರೆದಿಟ್ಟ ಲೇಖಕರು ನಿಜಕ್ಕೂ ಶ್ಲಾಘನೀಯರು. ಪರಿಚಯಾತ್ಮಕವಾದ ಚಿಕ್ಕಚಿಕ್ಕ ಕಥೆಗಳ ಮೂಲಕ ಗೌತಮರ ಚರಿತೆಯನ್ನು ಅವರು ಈ ಕಿರುಕೃತಿಯಲ್ಲಿ ಪರಿಚಯಿಸಿದ್ದಾರೆ. ಗೌತಮರ ವಿಚಾರವಾಗಿ ಇನ್ನಷ್ಟು ತಿಳಿಯುವ ಕುತೂಹಲವನ್ನು ಈ ಕೃತಿಯು ಹುಟ್ಟಿಸುವುದಲ್ಲಿ ಸಂಶಯವಿಲ್ಲ.
ಡಾ.ಗಣಪತಿ ಹೆಗಡೆ
ವಿದ್ವಾಂಸರು