ಮಹರ್ಷಿ ಜಮದಗ್ನಿ / Maharshi jamadagni

ಮಹರ್ಷಿ ಜಮದಗ್ನಿ / Maharshi jamadagni

ಪ್ರಕಾಶಕರು : ಶ್ರೀಭಾರತೀ ಪ್ರಕಾಶನ
ಪ್ರಕಾಶಿತ ವರ್ಷ : 2014 - 2024
ಭಾಷೆ : ಕನ್ನಡ
Buy book using below links

ಜಮತ್ ಹುತಭಕ್ಷಣಶೀಲಃ ಪ್ರಜ್ವಲಿತಃ ಅಗ್ನಿಃ ಜಮದಗ್ನಿಃ. ಹೆಸರಲ್ಲೇ ಬೆಂಕಿಯ ಭಗಭಗಾಯಮಾನತೆಯನ್ನು ತಳೆದವ. ಅಂತಹ ಜ್ವಲದಗ್ನಿಯು ನಿಷ್ಕಾಂತವಾಗಿ ನಿರ್ಣಾಮವಾದರೂ ಭೂಲಿಂಗಪಕ್ಷಿಯಂತೆ ತೇಜಃಶರೀರಿಯಾಗಿ ಗೋತ್ರಪ್ರವರ್ತಕ ಮಹರ್ಷಿಯಾದವನು ಜಮದಗ್ನಿ. ಆತನ ಕತೆಯೇ ಬೆರಗುವೆಟ್ಟ. ಕುತೂಹಲದ ಗೂಢಘಟ್ಟ. ಪರೋಕ್ಷಪ್ರಿಯಾ ಇವ ಹಿ ದೇವಾಃ ಎಂಬುದರ ಸಮುಪಬ್ರಹ್ಮಣವೇ ಜಮದಗ್ನಿಚರಿತ. ಈ ಆರ್ಷಾಖ್ಯಾನವನ್ನು ಲೇಖಕರು ಸಾರವತ್ತಾಗಿ ದರ್ಶನೀಯವಾಗಿಸಿದ್ದಾರೆ. ಸಪ್ತಾಂಗ, ಚತುರ್ದಶವಿದ್ಯೆ, ಪಂಚಸದ್ಗುಣ, ತ್ರಿವರ್ಗ, ಚತುರುಪಾಯ, ಪಂಚಕರ್ಮ, ಷಡಂಗರಾಜಧರ್ಮ, ಸಪ್ತವ್ಯಸನ, ಷಣ್ಮದ, ನವವಿಧಭಕ್ತಿ, ದಶವಿಧಧರ್ಮಲಕ್ಷಣ, ಷಡ್ಗವ್ಯ, ಷಟ್ಪಾಕ, ಷಡ್ರಸ – ಇಂತಹ ಅಪೂರ್ವವೂ ಅಸುಲಭಲಭ್ಯವೂ ಆದ ಸಂಖ್ಯಾಕೋಶಾರ್ಥಗಳನ್ನು ಗರ್ಭೀಕರಿಸಿಕೊಂಡ ಈ ಕೃತಿ ಭಾರತದ ಆರ್ಷತತ್ತ್ವದ ತವನಿಧಿಯಾಗಿದೆ.

-ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ

Leave a Reply

Your email address will not be published. Required fields are marked *