ಮಹರ್ಷಿ ಜೈಮಿನಿ / Maharshi jaimini
ಕನ್ನಡ ಕಾವ್ಯಗಳ ಪರಿಚಯವಿರುವವರು ಲಕ್ಷ್ಮೀಶನ ಜೈಮಿನಿ ಭಾರತದ ಬಗ್ಗೆ ಅರಿತಿರುತ್ತಾರೆ. ಇದು ಜೈಮಿನಿ ಮಹರ್ಷಿಗಳು ಸಂಸ್ಕೃತದಲ್ಲಿ ರಚಿಸಿರುವ ಅಶ್ವಮೇಧಪರ್ವದ ಸಾರಸಂಗ್ರಹ. ಜೈಮಿನಿಯು ಇದಲ್ಲದೆ ಸಂಸ್ಕೃತದಲ್ಲಿ ಮೀಮಾಂಸಾಶಾಸ್ತ್ರ ಹಾಗೂ ಜ್ಯೋತಿಶ್ಶಾಸ್ತ್ರಗಳ ಬಗ್ಗೆ ರಚಿಸಿರುವ ಶಾಸ್ತ್ರಗ್ರಂಥಗಳು ಪ್ರಸಿದ್ಧವಾಗಿವೆ. ಜೈಮಿನಿಯ ಹೆಸರು ಸಾಮವೇದದ ಒಂದು ಶಾಖೆಗೂ ಇದೆ. ವೇದಾಂತಸೂತ್ರಗಳಲ್ಲಿ ಜೈಮಿನಿಯ ಬಗ್ಗೆ ಉಲ್ಲೇಖವಿದೆ.
ಜೈಮಿನಿಯ ಈ ಎಲ್ಲ ವಿಶಿಷ್ಟತೆಗಳನ್ನು ಈ ಪುಸ್ತಕವು ನಮಗೆ ಚೆನ್ನಾಗಿ ಮನದಟ್ಟು ಮಾಡುತ್ತದೆ. ಅವರ ಕಾಲ-ದೇಶ, ಗುರುಶಿಷ್ಯ ಪರಂಪರೆ, ಶಾಸ್ತ್ರಗ್ರಂಥಗಳು, ಅಶ್ವಮೇಧಪರ್ವ ಇವುಗಳ ಬಗ್ಗೆ ಈ ಪುಸ್ತಕವು ಅರಿವು ನೀಡುತ್ತದೆ.
ಇದನ್ನು ಬರೆದ ಡಾ| ಸೂರ್ಯನಾರಾಯಣ ನಾಗೇಂದ್ರಭಟ್ಟ ಅವರು ಅಭಿನಂದನಾರ್ಹರು.
– ಜಿ. ವಿ. ಅರುಣ
ಸಾಹಿತಿ