ಮಹರ್ಷಿ ಮಾರ್ಕಂಡೇಯ/Maharshi maarkandeya
ಮಾರ್ಕಂಡೇಯ
ವಿಜ್ಞಾನ, ತಂತ್ರಜ್ಞಾನಗಳ ಮಾಯೆ ಜಗತ್ತನ್ನಾವರಿಸಿದ ಈ ಕಾಲಘಟ್ಟದಲ್ಲಿ ಸನಾತನವನ್ನು ಪುನಃಸ್ಥಾಪಿಸಿ, ಸಂರಕ್ಷಿಸಬೇಕಾದದ್ದು ಅವಶ್ಯಕತೆ ಮತ್ತು ಆದ್ಯತೆ. ಪರಮಪೂಜ್ಯ ಶ್ರೀಸಂಸ್ಥಾನದವರು ಕೈಗೊಂಡ, ಬೃಹದಭಿಯಾನದ ಒಂದು ಹೆಜ್ಜೆ ವಿನಾಯಕ ಭಟ್ ಅವರ ಈ ಪುಸ್ತಕ. ಬಾಲಕ ಮಾರ್ಕಂಡೇಯ ಭಗವಂತನಲ್ಲಿಟ್ಟ ಅನನ್ಯ ಭಕ್ತಿಯಿಂದ ಮೃತ್ಯುವನ್ನೂ ಜಯಿಸಿ ಮಹರ್ಷಿ ಮಾರ್ಕಂಡೇಯರಾದ ಕಥೆ, ಭಕ್ತಿಮಾರ್ಗದಲ್ಲಿ ಭಗವಂತನ ಸಾಕ್ಷಾತ್ಕಾರದ ಬಗೆಯು ಹೃದ್ಯ ಹಾಗೂ ವೇದ್ಯವಾಗಿಲ್ಲಿ ಹೇಳಲ್ಪಟ್ಚಿವೆ. ಅಧ್ಯಾತ್ಮ ಸಂಬಂಧಿ ಸಂದೇಹಗಳು, ಧರ್ಮಜಿಜ್ಞಾಸೆಗಳು ಚರ್ಚಿಸಲ್ಪಟ್ಟಿವೆ. ಮಾರ್ಕಂಡೇಯರ ಕೀರ್ತಿ ಚಿರಂಜೀವಿಯಾದಂತೆಯೇ, ಮಹತ್ವದ ಈ ಕೃತಿ ಚಿರಾಯುವಾಗಲಿ ಎಂದು ಆಶಿಸುತ್ತೇನೆ.
* ಡಾ. ಅಜಿತ್ ಹರೀಶಿ