ಮಹರ್ಷಿ ಯಾಜ್ಞವಲ್ಕ್ಯ/ Maharshi yajnavlkya
ಯಾಜ್ಞವಲ್ಕ್ಯ ಮಹರ್ಷಿಗಳ ತಪಃಪೂತ ಚಿಂತನೆಗಳು ಮತ್ತು ಅಪಾರವಾದ ಜ್ಞಾನಸಂಪತ್ತನ್ನು ಇಂದಿನ ಪೀಳಿಗೆಗೆ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಪರಮಪೂಜ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಪ್ರೇರಣೆ ಮಾರ್ಗದರ್ಶನದಲ್ಲಿ ವಿದ್ವಾನ್ ಶ್ರೀ ರಾಮಕೃಷ್ಣಭಟ್ಟ ಅವರಿಂದ ರಚಿತವಾಗಿರುವ ಈ ಕಿರು ಹೊತ್ತಿಗೆ ಮಹತ್ತ್ವದ ಸಕಾಲಿಕ ಕೊಡುಗೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಲ್ಲಿ ಲೇಖಕರು ಕೆಲವೇ ಪುಟಗಳಲ್ಲಿ ಯಾಜ್ಞವಲ್ಕ್ಯ ಮಹರ್ಷಿಗಳ ಚಿಂತನೆಯನ್ನು ಪರಿಚಯ ಮಾಡಿಕೊಟ್ಟಿದ್ದಾರೆ.
ವಿದ್ವತ್ಪೂರ್ಣವಾದ ಮುನ್ನುಡಿಯನ್ನು ಬರೆಯುವ ಮೂಲಕ ವಿದ್ವಾನ್ ಕೆ.ಎಲ್. ಶಂಕರನಾರಾಯಣಜೋಯ್ಸರು ಕೃತಿಯ ಮೆರುಗನ್ನು ಹೆಚ್ಚಿಸಿದ್ದಾರೆ.
ಪಿ.ವಿ. ಕೃಷ್ಣ ಭಟ್ಟ