ಮಹಾಮುನಿ ಭರತ/ Mahamuni bharata
ನಾಟ್ಯಶಾಸ್ತ್ರದ ಪ್ರವರ್ತಕನಾದ ಭರತಮುನಿಯ ಕೊಡುಗೆಯನ್ನು ಸ್ಮರಿಸಿದಷ್ಟೂ ಸಾಲದು. ಅದೆಷ್ಟೋ ಮಂದಿ ಅವನನ್ನು ನಿತ್ಯದಲ್ಲೂ ನಾಟ್ಯಾರಾಧನೆಯ ಮೂಲಕ ಆರಾಧಿಸುತ್ತಿದ್ದಾರೆ; ಪೂಜಿಸುತ್ತಿದ್ದಾರೆ; ಅವನ ಭಾವ-ಭಂಗಿಗಳನ್ನು ತಮ್ಮ ಅಧ್ಯಾತ್ಮ ನೆಲೆಯಲ್ಲಿ ಅನುಭವಿಸುತ್ತಿದ್ದಾರೆ; ಮುಂದಿನ ಪೀಳಿಗೆಗೆ ಇದನ್ನು ಸಂಕ್ರಾಂತಿಸಲು ಬೇಕಾದ ಭಾವಪುಷ್ಟಿಯನ್ನು ತುಂಬಿಕೊಳ್ಳುತ್ತಿದ್ದಾರೆ.
ಇದಕ್ಕೆ ಪುಷ್ಟಿಯೋ ಎಂಬಂತೆ ಭರತಮುನಿಯ ಬಗ್ಗೆ ವಿವರಿಸಲಾದ ಈ ಗ್ರಂಥವು ನಮಗೆ ಕೈದೀವಿಗೆ. ಇದರ ಅಧ್ಯಯನದಿಂದ ಭರತಮುನಿ ಮತ್ತು ನಾಟ್ಯಶಾಸ್ತ್ರದ ಬಗ್ಗೆ ಹೆಮ್ಮೆ ಉಂಟಾಗುತ್ತದೆ, ಭವ್ಯ ಪರಂಪರೆಯ ವಿದ್ಯೆ ಕಲೆಗಳಿಗೆ ಗೌರವ ಸಲ್ಲಿಸಿದಂತಾಗುತ್ತದೆ.
ನರಸಿಂಹ ಭಟ್