ಮೌಲ್ಯಶಿಕ್ಷಣ/ Mowlyashikshana
ಜೀವನದಲ್ಲಿ ಮೌಲ್ಯಗಳು ಬಹಳ ಮುಖ್ಯ. ಮೌಲ್ಯಗಳು ಒಂದು ದಿನದಲ್ಲಿ ಕಲಿಯುವಂತಹ ವಿಷಯವಲ್ಲ. ಮೌಲ್ಯದ ಬೀಜ ಬಿತ್ತಬೇಕು, ವರ್ಷಗಳ ಕಾಲ ಅದಕ್ಕೆ ನೀರುಣಿಸಬೇಕು. ಆಗ ತಾನಾಗಿಯೆ ತಣ್ಣಗೆ ಹೂ ಬಿಟ್ಟು ನಳನಳಿಸುವ ವೃಕ್ಷವದು.
ಅಂತಹ ಮೌಲ್ಯಗಳನ್ನು ಎಳವೆಯಿಂದ ಕಲಿಯಲು, ಆಯಾ ವಯಸ್ಸಿಗನುಗುಣವಾಗಿ ಕಲಿಸಲು ಪೋಷಕ ಈ ‘ಮೌಲ್ಯಶಿಕ್ಷಣ’. ಸನಾತನ ಸಂಸ್ಕ್ರತಿಗೆ ಪೂರಕವಾಗಿರುವ ಈ ಮೌಲ್ಯಗಳು ಉತ್ತಮ ಹಾಗೂ ಉತ್ತೀರ್ಣ ಜೀವನಕ್ಕೆ ಸೋಪಾನ.