ಶುಕ್ರಾಚಾರ್ಯ/ Shukracharaya
ಶುಕ್ರಾಚಾರ್ಯ
ಡಿ. ಎಸ್. ಶ್ರೀಧರರ ಈ ಕೃತಿಯಲ್ಲಿ ಮಹಾಚೇತನ ಶುಕ್ರಾಚಾರ್ಯರ ಕಥೆಯೊಂದಿಗೆ ತಮಾಸುರ, ಪ್ರಹ್ಲಾದ, ಬಲಿಚಕ್ರವರ್ತಿ, ಖ್ಯಾತಿದೇವಿ, ಅರಜೆ, ಕಚ, ದೇವಯಾನಿ, ವೃಷಪರ್ವ, ಶರ್ಮಿಷ್ಠೆ, ಯಯಾತಿ ಮೊದಲಾದವರ ಕಥೆಗಳೂ ಹೆಣೆದುಕೊಂಡು ಸಾಗುತ್ತವೆ. ಜೊತೆಗೆ ಆ ಕಾಲಮಾನದ ಸುರ-ಅಸುರರ ನಡುವಿನ ಮತ್ಸರ, ಸಂಘರ್ಷ, ಒಳಿತು-ಕೆಡಕು, ಅಧಿಕಾರ ಮೋಹ, ಪ್ರೀತಿ, ತ್ಯಾಗ, ಶಾಪ ಮೊದಲಾದ ಸಂಗತಿಗಳನ್ನು ತೆರೆದಿಡುತ್ತದೆ. ಕೃತಿ ಲೌಕಿಕದ ಹಲವು ಗಹನ ವಿಚಾರಗಳನ್ನು ಸರಳವಾಗಿ, ಮನದುಂಬುವ ತೆರದಲ್ಲಿ ಸುಲಲಿತ ಶೈಲಿಯಲ್ಲಿ ಚಿತ್ರಿಸುತ್ತದೆ.
ಟಿ.ಎಂ.ಸುಬ್ಬರಾಯ