ಶ್ರೀಕೃಷ್ಣ ಚೈತನ್ಯ /Sreekrishna chaithanya
ಶ್ರೀಕೃಷ್ಣಚೈತನ್ಯ
ಶರೀರವನ್ನು ಕ್ಷೇತ್ರವೆಂದು ಕರೆದಿದ್ದಾನೆ ಶ್ರೀಕೃಷ್ಣ. ಕಾಯವೇ ಕ್ಷೇತ್ರವಾಗುವ ಈ ನಂಬಿಕೆಗೆ ಕಾಯದ ಮೂಲಕವೇ ದೈವತ್ವಕ್ಕೇರಿದ ಮಹಾಪುರುಷರ ಚರಿತ್ರೆಗಳು ಪುಷ್ಟಿ ಕೊಡುತ್ತವೆ. ಈ ಸದ್ಗಂಥದಲ್ಲಿ ಸಾಧುವಾದ ನಿಮಾಯಿ ಪಂಡಿತರು ತಮ್ಮ ಅಪರೂಪದ ಅಧ್ಯಯನ, ಭಕ್ತಿ, ಶ್ರದ್ಧೆಗಳಿಂದ ಶ್ರೀಚೈತನ್ಯರಾಗುವ ಮಾರ್ಗ ಓದುಗನ ಆತ್ಮದೊಳಗೆ ಶಿವಪ್ರೇಮದ ಆರ್ದ್ರತೆಯನ್ನು ತುಳುಕಿಸುತ್ತದೆ. ನೋಟಕ್ಕೆ ಪ್ರೇಮ, ಹೆಜ್ಜೆಗೆ ಕಾರುಣ್ಯ, ಮಾತಿಗೆ ಸ್ಫಟಿಕತ್ವ, ಹೃದಯಕ್ಕೆ ಕರುಣೆ, ಆತ್ಮಕ್ಕೆ ದಯೆ ಈ ಓದಿನಿಂದ ಲಭಿಸುತ್ತದೆ. ಮನುಷ್ಯ ಹೆಚ್ಚುಹೆಚ್ಚು ಮನುಷ್ಯನಾಗಬೇಕಾದ ತುರ್ತುಕಾಲವಿದು. ಶ್ರೀಚೈತನ್ಯರ ಅಧ್ಯಯನ ಮತ್ತು ಮನನದಿಂದ ನಮ್ಮ ನಾಳೆಗಳು ಖಂಡಿತವಾಗಿ ಪ್ರೇಮಮಯವಾಗುತ್ತವೆ.
….
ನಂದಿನಿ ಹೆದ್ದುರ್ಗ
ಕವಯಿತ್ರಿ, ಕಥೆಗಾರ್ತಿ