ಶ್ರೀಸದಾಶಿವ ಬ್ರಹ್ಮೇಂದ್ರ / Sreesadashiva bramendra

ಶ್ರೀಸದಾಶಿವ ಬ್ರಹ್ಮೇಂದ್ರ / Sreesadashiva bramendra

ಪ್ರಕಾಶಕರು : ಶ್ರೀಭಾರತೀ ಪ್ರಕಾಶನ
ಪ್ರಕಾಶಿತ ವರ್ಷ : 2014 - 2024
ಭಾಷೆ : ಕನ್ನಡ
Buy book using below links

ಸನಾತನ ಧರ್ಮ ಎರಡು ಬಹಳ ಮುಖ್ಯವಾದ ರೋಗದಿಂದ ಬಳಲುತ್ತಿದೆ. ಒಂದು ಈ ಧರ್ಮೀಯರಿಗೆ ಸ್ವತಃ ನಮ್ಮ ಧರ್ಮ, ಅದರ ಶ್ರೇಷ್ಠತೆ, ಮೌಲ್ಯ, ಇತಿಹಾಸ, ಜ್ಞಾನ, ಅವಧೂತತೆ, ಲೌಕಿಕ ಮತ್ತು ಅಲೌಕಿಕತೆಯನ್ನು ಬೆಸೆದು ಹೊಸೆದ ಆತ್ಮ ಸಾಕ್ಷಾತ್ಕಾರ, ಸಂಸ್ಕಾರದ ಮಹೋನ್ನತ ಪರಂಪರೆಯ ಅರಿವೇ ಇಲ್ಲದಿರುವುದು. ಎರಡನೆಯದ್ದು, ಆ ಅರಿವಿನ ಸಿಂಧುವನ್ನು ಬಿಂದುವಿನಷ್ಟೂ ಪೀಳಿಗೆಗೆ ಹಂಚಬೇಕೆನ್ನುವ ಕನಿಷ್ಠ ಎಚ್ಚರವನ್ನೂ ಹೊಂದಿಲ್ಲದೇ ಇರುವುದು. ಈ ಹಿನ್ನೆಲೆಯಲ್ಲಿ ‘ಗುರುಗ್ರಂಥಮಾಲಿಕೆ’ಯ ಒಂದೊಂದು ಎಸಳೂ ಅತ್ಯಂತ ಮೌಲಿಕ ಮತ್ತು ವರ್ತಮಾನದ ಧರ್ಮಗ್ಲಾನಿಯ ಸಂದರ್ಭದ ಆತ್ಯಂತಿಕ ಜರೂರತ್ತು ಅಂತ ನನ್ನ ಭಾವನೆ.

ಜ್ಞಾನ, ಧ್ಯಾನ, ಪೂಜೆ, ತಪಸ್ಸು, ಆಕಾರ-ನಿರಾಕಾರ, ಅಂತರಂಗ-ಬಹಿರಂಗ, ಸಾಕ್ಷಾತ್ಕಾರ, ದರ್ಶನ, ಯೌಗಿಕ ಶಕ್ತಿ, ಮೌನ, ಮೌನದ ಆಳದ ಬ್ರಹ್ಮಾಂಡ ಅಗ್ನಿ ಈ ಎಲ್ಲವುಗಳ ಬ್ರಹ್ಮರೂಪಿಯಾಗಿ ನಮ್ಮ ಮಧ್ಯೆ 18ನೇ ಶತಮಾನದ ಮಹಾಪ್ರಸಾದವಾಗಿ ಸನಾತನ ಧರ್ಮಕ್ಕೆ ದಕ್ಕಿದ ‘ಶ್ರೀಸದಾಶಿವ ಬ್ರಹ್ಮೇಂದ್ರ’ರ ಕುರಿತಾದ ಈ ಕಿರು ಹೊತ್ತಗೆ ವರ್ತಮಾನದ ಅಕ್ಷಯಪಾತ್ರೆ. ಅವರ ಜೀವನ ಮತ್ತು ಸಾಧನೆಗಳು ಮನುಕುಲಕ್ಕೆ ದಕ್ಕಿದ ಕಾಲಾತೀತ ಭಾಷ್ಯ.

ಬಿ.ಗಣಪತಿ
ಪತ್ರಕರ್ತ

Leave a Reply

Your email address will not be published. Required fields are marked *