ಶ್ರೀಸಮರ್ಥ ರಾಮದಾಸ/ Shree smaratha Ramadasa
ಹದಿನೇಳನೇ ಶತಮಾನದಲ್ಲಿ ಆಗಿಹೋದ ಸಂತಶ್ರೇಷ್ಠ ಸಮರ್ಥ ರಾಮದಾಸರು ಭಾರತದ ಸಂಸ್ಕೃತಿಗೆ ತಮ್ಮ ಚಾರಿತ್ರ್ಯ, ತಾತ್ತ್ವಿಕತೆ, ನಿಃಸ್ಪೃಹತೆ, ಕವಿತ್ವ, ರಾಜಪೀಠಕ್ಕೆ ಮಾರ್ಗದರ್ಶನ ಮುಂತಾದ ಯೋಗದಾನಗಳಿಂದ ಕೊಟ್ಟ ಕೊಡುಗೆ ಅಪರಿಮಿತ. ಶಿವಾಜಿಯಂಥ ವೀರ ದೊರೆಯ ಗುರುವಾಗಿ ಕ್ಷಾತ್ರದ ಮೇರುವನ್ನು ಸಾಧಿಸಲು ದಾರಿ ತೋರಿದುದರ ಜೊತೆಗೇ ಯೋಗಮಾರ್ಗದ ಮೂಲಕ ಅಲೌಕಿಕ ಬದುಕಿನ ಸತ್ತ್ವಸಾರವನ್ನೂ ಉಣಿಸಿದ ಈ ಸಂತರ ಬದುಕು – ನೋಟಗಳನ್ನು ಮಧು ದೊಡ್ಡೇರಿ ಸರಳ, ಸುಂದರ, ಸೊಗಸಿನ ಭಾಷೆಯ ಕಾದಂಬರಿ ರೂಪದಲ್ಲಿ ನೀಡಿದ್ದಾರೆ. ಈ ಕೃತಿ ವಟವೃಕ್ಷವನ್ನು ಬೀಜರೂಪದಲ್ಲಿ ಮಂಡಿಸಿದೆ.
– ಹರೀಶ್ ಕೇರ