ಶ್ರೀಸುರೇಶ್ವರಾಚಾರ್ಯ/ Shree sureswaracharya
ಪುರಾಣೇತಿಹಾಸ ಕಾಲದಿoದ ವರ್ತಮಾನದವರೆಗಿನ ಸoತಶ್ರೇಷ್ಠರ, ಮಹಾಪುರುಷರ, ಮಹಾಚೇತನಗಳ ಬದುಕಿನ ಚಿತ್ರಣವನ್ನು, ಬೋಧನೆಯ ತತ್ತ್ವವನ್ನು, ಜೀವನ ಸಂದೇಶವನ್ನು ಬಿತ್ತರಿಸುವ ಅರವತ್ತು ಕಿರು ಹೊತ್ತಿಗೆಗಳ ಗುಚ್ಛವೇ ಗುರುಗ್ರoಥಮಾಲಿಕೆ.
ಆಚಾರ್ಯಶಂಕರರ ಪ್ರತಿನಿಧಿಯಾಗಿ ಜಗತ್ತಿಗೆ ಧರ್ಮಧಾರೆಯನ್ನು ಪಸರಿಸುತ್ತಾ ಅದ್ವೈತವೇದಾಂತ ಸಂಪ್ರದಾಯದ ಭದ್ರ-ಬುನಾದಿಯನ್ನು ಹಾಕಿಕೊಟ್ಟ ಶ್ರೀಸುರೇಶ್ವರಾಚಾರ್ಯರ ಬಗೆಗಿನ ಈ ಕೃತಿ ಗುರುಗ್ರoಥಮಾಲಿಕೆಯ ಸರಣಿಯ ಅರವತ್ತು ಪುಸ್ತಕಗಳಲ್ಲೊoದು.
ಸನಾತನಧರ್ಮದ ವಿಶಿಷ್ಟತೆಯನ್ನು, ಶ್ರೇಷ್ಠತೆಯನ್ನು, ಶ್ರೀಮಂತಿಕೆಯನ್ನು ಸಾರಿ ಹೇಳಿದ; ಶ್ರೀವಿದ್ಯಾನಂದ ದರಂತಹ ಶ್ರೇಷ್ಠಸಂತರಿಗೆ ಸಂನ್ಯಾಸ ದೀಕ್ಷೆಯನ್ನು ಅನುಗ್ರಹಿಸಿದ; ನಾಡಿನ ಶ್ರೇಷ್ಠ ಧರ್ಮಾಚಾರ್ಯರಲ್ಲೊಬ್ಬರಾದ ಶ್ರೀಸುರೇಶ್ವರಾಚಾರ್ಯರ ಬದುಕಿನ ಕೆಲಕಾಲಘಟ್ಟವನ್ನು ಪರಿಮಿತಿಯ ಅವಕಾಶದಲ್ಲಿ ಪರಿಪೂರ್ಣವಾಗಿ ಪ್ರಚುರಪಡಿಸಲು ಪ್ರಯತ್ನಿಸಿದ ಕೃತಿಕಾರರ ಕಾರ್ಯ ಅಭಿನಂದನಾರ್ಹ.
ದೀಪಕ ಹೆಗಡೆ ಗೋಳಿಕೈ