ಶ್ರೀಹಸ್ತಾಮಲಕಾಚಾರ್ಯ/Shreehastamalakacharya
ಶ್ರೀಹಸ್ತಾಮಲಕಾಚಾರ್ಯ
ಈ ಜೀವ ಜಗತ್ತಿಗೆ ನಮಗೆ ನಿಲುಕದೊಂದು ತರ್ಕವಿದೆ. ಕಾಲನ ಆಯಾ ಬಿಂದುವಿನಲ್ಲಿ ತನ್ನ ಅಸ್ತಿತ್ವಕ್ಕೆ ಅಗತ್ಯವಿರುವ ಚೇತನಗಳನ್ನು ಅದು ತನ್ನಿಂದ ತಾನೇ ಕಂಡುಕೊಳ್ಳುತ್ತದೆ. ತನಗೆ ತಾನು ಪರಿಪೂರ್ಣವಾಗಿರುವ
ಸೃಷ್ಟಿಯ ಅಸೀಮ ಶಕ್ತಿಯೇ ಅದು.
ಶ್ರೀಶಂಕರಭಗವತ್ಪಾದರ ಅತ್ಯಂತ ಕಿರಿಯ ಶಿಷ್ಯರೆಂದೇ ಗುರ್ತಿಸಲ್ಪಡುವ ಹಸ್ತಾಮಲಕರು ಅಂಥ ದಿವ್ಯಚೇತನಗಳಲ್ಲೊಬ್ಬರು. ತಮ್ಮ ಹಸ್ತಾಮಲಕಸ್ತೋತ್ರಕ್ಕೆ ಗುರು ಶ್ರೀಶಂಕರರಿಂದಲೇ ವ್ಯಾಖ್ಯಾನ ಪಡೆದ ಶ್ರೇಷ್ಠತೆ ಅವರದ್ದು.
ಈ ಕೃತಿ ಆತ್ಮಪ್ರಕಾಶಿತ ಮಹಾಸಂತರೊಬ್ಬರನ್ನು ಸಮಗ್ರವಾಗಿ ಪರಿಚಯಿಸುವ ಮೂಲಕ ನಮ್ಮ ಒಳಗನ್ನೂ ಬೆಳಗಲೆತ್ನಿಸುತ್ತದೆ.
-ಅನನ್ಯ ತುಷಿರಾ