ಶ್ವೇತಾ ಹೊಸಬಾಳೆ

ಶ್ವೇತಾ ಹೊಸಬಾಳೆ
ಮಹಾಭಾರತ ಅನ್ವೇಷಣೆ
ಈ ಪುಸ್ತಕದಲ್ಲಿ ಮಹಾಭಾರತಕ್ಕೆ ಸಂಬಂಧಪಟ್ಟಂತೆ ತಲೆಯಲ್ಲಿ ಬರುವ ಹಲವು ಪ್ರಶ್ನೆಗಳಿಗೆ ಸಮಾಧಾನಕರ ಉತ್ತರಗಳಿವೆ, ಅದಕ್ಕೆ ಹೊಂದಿಕೊಂಡಂತೆ ನಮಗೆ ತಿಳಿಯದಿರುವ ಎಷ್ಟೋ ಮಾಹಿತಿಗಳಿವೆ. ಮಹಾಭಾರತದ ಕಥೆ ಶುರು ಆಗುವುದು ಎಲ್ಲಿಂದ? ಮುಗಿಯುವುದು ಹೇಗೆ? ಮೂಲ ಮಹಾಭಾರತದ ಅಂದ್ರೆ ಯಾವುದು? ಮೋಸ ಮಾಡುತ್ತಾರೆ ಎಂದು ಗೊತ್ತಿದ್ದೂ ಧರ್ಮಾತ್ಮನಾದ ಯುಧಿಷ್ಠಿರ ದ್ಯೂತವಾಡಲು ಒಪ್ಪಿಕೊಂಡಿದ್ದು ಯಾಕೆ? ಕೃಷ್ಣ ಅರ್ಜುನನಿಗೆ ಗೀತೆಯನ್ನು ಬೋಧಿಸಿದ ಸಂದರ್ಭ, ಪಾಂಡವರ ವಂಶಾವಳಿ ಅಂದ್ರೆ ಹಿಂದಿನ ಎಷ್ಟೋ ತಲೆಮಾರುಗಳ ರಾಜರುಗಳು, ಒಂದೊಂದು ಯುಗವೂ ಮುಕ್ತಾಯವಾಗಿ ಹೊಸ ಯುಗ ಪ್ರಾರಂಭವಾಗಿದ್ದು ಹೇಗೆ? ಕುಂತಿ ಯಾರಿಗೂ ಗೊತ್ತಾಗದಂತೆ ಒಂಭತ್ತು ತಿಂಗಳು ತನ್ನ ಗರ್ಭ ರಹಸ್ಯವನ್ನು ಹೇಗೆ ಕಾಪಾಡಿಕೊಂಡಿರಬಹುದು? ಹೀಗೆ ಮಹಾಭಾರತದ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಬಯಸುವ ಕುತೂಹಲಿಗಳಿಗೆ ಒಳ್ಳೆಯ ಆಕರ ಈ ಪುಸ್ತಕ.
ಯುದ್ಧವೆಲ್ಲಾ ಮುಗಿದ ನಂತರ ಯುಧಿಷ್ಠಿರ ಮಾತ್ರ ಸ್ವರ್ಗಕ್ಕೆ ಹೋಗಿ ಅಲ್ಲಿ ದುರ್ಯೋಧನನ್ನು ಕಂಡು ಕಕ್ಕಾಬಿಕ್ಕಿಯಾಗುವ ಸನ್ನಿವೇಶದಲ್ಲಿನ ಪಾಪ ಪುಣ್ಯಗಳ ಫಲ ಹೇಗೆ ಸಿಕ್ಕುತ್ತದೆ? ಎನ್ನುವ ವಿಶ್ಲೇಷಣೆಯಲ್ಲಿ ಯುಧಿಷ್ಠಿರನ ವ್ಯಕ್ತಿತ್ವದ ಆಳ ವಿಶಿಷ್ಟತೆಯನ್ನು ಲೇಖಕರು ಹೇಳಿದ್ದಾರೆ. ಸ್ವರ್ಗವೇ ಆದರೂ ತನ್ನವರು ಇಲ್ಲದಿದ್ದರೆ ಅದು ತನಗೆ ಬೇಡ ಎನ್ನುವ ಯುಧಿಷ್ಠಿರನ ನಿಲುವು ಹೇಗೆ ಆಧುನಿಕ ಮನುಷ್ಯನ ತೊಳಲಾಟಗಳಿಗೂ ಉತ್ತರವಾಗಬಲ್ಲದು ಎನ್ನುವ ವಿವರಣೆ ಚೆನ್ನಾಗಿದೆ. ಅಂಟಿರದ ಆದರೆ ನಂಟಿರುವ ಬದುಕನ್ನು ಬಾಳಿದ ಯುಧಿಷ್ಠಿರ , ಕೃಷ್ಣ , ಅರ್ಜುನ ಈ ಥರದ ವ್ಯಕ್ತಿತ್ವಗಳ ಜೊತೆ ಇನ್ನೂ ಹಲವಾರು ಪಾತ್ರಗಳ ಮೂಲಕ ಮಹಾಭಾರತ ಹೇಗೆ ಬದುಕಿನ ಮಹಾದರ್ಶನವಾಗಿದೆ ಎನ್ನುವುದರ ಸ್ಥೂಲ ಚಿತ್ರಣ ಈ ಪುಸ್ತಕದ ಓದುಗರಿಗೆ ದಕ್ಕುವಂತೆ ಆಸ್ಥೆ ವಹಿಸಿ ರಚಿಸಲಾಗಿದೆ. ಈ ರೀತಿಯ ಹೊಸಾ ಪ್ರಯತ್ನಕ್ಕೆ ಲೇಖಕರಿಗೂ ಪ್ರಕಾಶಕರಿಗೂ ಧನ್ಯವಾದಗಳು🙏
Jagadisha Sharma Sampa
Jameel Sawanna
ಪುಟಗಳು ೧೧೪
ಬೆಲೆ ೧೮೦
#ಸಾವಣ್ಣ