ಸಂತ ಜ್ಞಾನೇಶ್ವರ / Santha jnaneswara
ಭಾರತದ ಮಣ್ಣು ನಿಜಕ್ಕೂ ಪುಣ್ಯದ ಮಣ್ಣು. ಬೇರೆ ಬೇರೆ ಕಡೆ ಒಬ್ಬರೋ ಇಬ್ಬರೋ ಸಂತರಿದ್ದರೆ ಭಾರತದ ನೆಲದಲ್ಲಿ ಎಷ್ಟೊಂದು ಸಂತರು, ಜ್ಞಾನಿಗಳು! ನಿಜಕ್ಕೂ ಪುಣ್ಯಭೂಮಿ ಇದು. ಸಂತರ, ಜ್ಞಾನಿಗಳ ನೆಲದಲ್ಲಿ ಅದೇ ಹೆಸರಿಟ್ಟುಕೊಂಡವರು ‘ಸಂತಜ್ಞಾನೇಶ್ವರ’ರು ಮತ್ತು ಅನೇಕರಂತೆ ಅಲ್ಪಾವಧಿಯಲ್ಲಿ ಅರಿವಿನ ತುದಿ ತಲುಪಿದವರು, ಜ್ಞಾನದೇವರಾದವರು. ಅವರ ವಿಶೇಷವೆಂದರೆ ಅಧ್ಯಾತ್ಮದ ಹಾದಿಯನ್ನು ಭ್ರಾತೃತ್ವದ ಸಹಯಾನದಲ್ಲಿ ಮಾಡಿದ್ದು.
ಇಂಥವರು ಇದ್ದರು, ಹೀಗೆ ಬಾಳಿದರು ಎಂದು ಲೋಕಕ್ಕೆ ತಿಳಿಸುವುದೂ ಒಂದು ಮಹತ್ತ್ವದ ಸತ್ಕಾರ್ಯ. ಅದಕ್ಕಾಗಿ ಅಭಿನಂದನೆ.
ಕುಸುಮಾ ಆಯರಹಳ್ಳಿ