ಸಂತ ತ್ಯಾಗರಾಜ / Santha thyagaraja
ಸಂಗೀತ ಕ್ಷೇತ್ರಕ್ಕೆ ತ್ಯಾಗರಾಜರ ಕೊಡುಗೆಯನ್ನ ಕೆಲವು ಪುಟಗಳಲ್ಲಿ ವರ್ಣಿಸುವುದೆಂದರೆ ಸಾಗರವನ್ನು ಉದ್ಧರಣೆಯಲ್ಲಿ ಹಿಡಿದಿಡುವಂಥ ಸಾಹಸ.
ಪಂಡಿತೋತ್ತಮರಾದ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರಂಥವರಿಗೆ ಮಾತ್ರ ಈ ಸಾಹಸ ಸಾಧ್ಯ. ಈ ಹೊತ್ತಿಗೆಯೇ ಮುಕ್ಕಾಲು ಎಡುಪಿನ ಮಧ್ಯಮ ಕಾಲದ ಕೃತಿಯಂತಿದೆ. ತ್ಯಾಗರಾಜರ ಪರಂಪರೆ, ಜೀವನ, ವಿಶೇಷ ಹಿನ್ನೆಲೆಯುಳ್ಳ ಕೃತಿ ವಿಚಾರಗಳೇ ಅದರ ಪಲ್ಲವಿ, ಅನುಪಲ್ಲವಿ, ಚರಣಗಳು. ಸಂಗೀತ ವಿದ್ಯಾರ್ಥಿಗಳಿಗಂತೂ ಇದೊಂದು ಓದಲೇಬೇಕಾದ ಛಾಪು ತಾಳ ನಿಬದ್ಧ ಕೈಪಿಡಿ. ಅಷ್ಟು ಬಿಗಿ, ಅಷ್ಟು ಅಚ್ಚುಕಟ್ಟು.
-ವಿದುಷಿ ರಂಜನೀ ಕೀರ್ತಿ