ಅತ್ರಿ ಮಹರ್ಷಿ / ATre maharshi

ಬಹಳವೇ ಆಸಕ್ತಿಕರವಾದ ಹಿನ್ನೆಲೆ ಅತ್ರಿ ಮಹರ್ಷಿಗಿದೆ. ಅವರು , ಅವರ ಪತ್ನಿ ಅನಸೂಯಾ ತ್ರಿಮೂರ್ತಿಗಳನ್ನು ಆವಾಹನೆ ಮಾಡಿಕೊಂಡವರು. ಇದಕ್ಕಿಂತ ಇವರ ಲೋಕೋಪಕಾರದ ಕೆಲಸವಾದ ಗ್ರಂಥಗಳ ರಚನೆಗಳು ಹೆಚ್ಚು ಮಹತ್ತ್ವವುಳ್ಳವು.
ಲಘುಅತ್ರಿಸಂಹಿತೆ ಎಂಬ ಗ್ರಂಥವು ಪ್ರಾಣಾಯಾಮದ ಬಗ್ಗೆ ವಿಶದೀಕರಿಸುತ್ತದೆ. ಅತ್ರಿಸಂಹಿತೆಯು ಗುರುವಿನ ಮಹತ್ತ್ವದ ಬಗ್ಗೆ ವಿವರ ನೀಡುತ್ತದೆ. ವೃದ್ಧಾತ್ರಿಸಂಹಿತೆಯಲ್ಲಿ ದಾನದ ಬಗ್ಗೆ ವಿವರಗಳಿವೆ. ಲೋಕಕಲ್ಯಾಣಕ್ಕಾಗಿ ಅತ್ರಿಮಹರ್ಷಿಯ ಕೊಡುಗೆ ಅಪಾರ. ಇವನ್ನು ಸರಿಯಾಗಿ ಉಪಯೋಗಿಸಿಕೊಳ್ಳುವ ಹೊಣೆ ನಮ್ಮದಾಗಬೇಕು.
ಯತಿರಾಜ್ ವೀರಾಂಬುಧಿ