ಭೀಷ್ಮಾಚಾರ್ಯ / Bhishmacharya
ಭೀಷ್ಮಾಚಾರ್ಯ
ಧೀರತನದಲ್ಲಿ ಸರಿಸಾಟಿಯಿಲ್ಲದ ಶ್ರೇಷ್ಠ ನೆಲೆ, ಭಾಗವತೋತ್ತಮತೆ, ಧರ್ಮಸೂಕ್ಷ್ಮಗಳನ್ನು ವಿಶೇಷ ಮನೋಭೂಮಿಕೆಯಿಂದ ತಿಳಿಗೊಳಿಸುವ ಕೌಶಲ, ಕುಲರಕ್ಷಣೆ, ಸಾತ್ತ್ವಿಕ ಜೀವನ, ಧರ್ಮಪರಾಯಣತೆ, ರಾಜನೀತಿಯ ವಿಶಾರದತೆ, ಲೋಕಕ್ಕೆ ವಿಷ್ಣುಸಹಸ್ರನಾಮ ಕೊಟ್ಟ ಮಹಿಮೆ- ಇವೆಲ್ಲದರ ಒಟ್ಟು ರೂಪವೇ ದೇವವ್ರತ ಭೀಷ್ಮ.
ಯುವ ಲೇಖಕ ಕೀರ್ತಿಭಟ್ ಚುಟ್ಟಿಕೆರೆ, ಇಂತಹ ಭೀಷ್ಮಾಚಾರ್ಯರ ಬದುಕನ್ನು ಹಲವು ದೃಷ್ಟಿಗಳಿಂದ ಕಂಡು ಸುಂದರವಾಗಿ ನಿರೂಪಿಸಿದ್ದಾರೆ. ಇದು ಪುರಾಣಪುರುಷನನ್ನು ಅರಿಯಲು ಒಂದು ಉತ್ತಮ ಕೊಡುಗೆ. ಓದಿದರೆ ಜ್ಞಾನಾನಂದ ಖಚಿತ.
ಮೋಹನ ಭಾಸ್ಕರ ಹೆಗಡೆ ಹೆರವಟ್ಟ
ಚಿಂತಕರು