ಮಹರ್ಷಿ ಪಾಣಿನಿ / Maharshi paanini
ಪಾಣಿನಿ
ಪಾಣಿನಿಯ ಕುರಿತು ವಯಕ್ತಿಕ ವಿವರಗಳು ಅಲಭ್ಯವಾದರೂ, ಆ ಕುರಿತು ಸಂಶೋಧಿಸಿ ಕನ್ನಡ ಸಾರಸ್ವತ ಲೋಕಕ್ಕೆ ಇಲ್ಲಿ ಕೃತಿಕಾರರು ನೀಡಿದ್ದಾರೆ. ಆತನ ಅಷ್ಟಾಧ್ಯಾಯಿಯ ಕೇವಲ 3983 ಸೂತ್ರಗಳ ಮೂಲಕ ಸಂಸ್ಕೃತ ಭಾಷೆಯ ಶಬ್ದವಿನ್ಯಾಸ, ಧಾತುರೂಪ ಮತ್ತು ವ್ಯಾಕರಣದ ನಿಯಮಗಳನ್ನು ಅರಿಯಬಹುದಾಗಿದೆ. ತನಗಿಂತ ಹಿಂದೆ ಲಭ್ಯವಿದ್ದ ಎಲ್ಲ ವ್ಯಾಕರಣ ನಿಯಮಗಳನ್ನು ಕ್ರೋಢಿಕರಿಸಿ ಅವನು ರಚಿಸಿದ ಅದು ಜಗತ್ತಿನ ಭಾಷಾಶಾಸ್ತ್ರದಲ್ಲಿಯೇ ಅಪೂರ್ವ ಗ್ರಂಥ. ಇಂತಹ ಮಹಾನ್ ಋಷಿಯ ಕುರಿತು ಸುಲಭದಲ್ಲಿ ಅರ್ಥವಾಗುವ ಹಾಗಿದೆ ಈ ಕೃತಿ.
-ನಾರಾಯಣ ಯಾಜಿ, ಸಾಲೇಬೈಲು