ಮಹರ್ಷಿ ವಾಲ್ಮೀಕಿ / Maharshi valmiki
ಮಹರ್ಷಿವಾಲ್ಮೀಕಿ
ವಿಶ್ವದ ಸರ್ವೋತ್ಕೃಷ್ಟ ಗ್ರಂಥವಾದ ವಾಲ್ಮೀಕಿ ರಾಮಾಯಣದ ವ್ಯಾಪ್ತಿ, ಪ್ರಭಾವ, ಆದ್ಯಂತ ವಿಸ್ತೃತ. ವಾಲ್ಮೀಕಿಮಹರ್ಷಿಗಳು ನಮ್ಮ ದೇಶದ ನಮ್ಮ ಕಾಲದ ಎಲ್ಲ ಕವಿಗಳಿಗೂ ಗುರುಪ್ರಾಯರೇ, ಸಂಸ್ಕೃತದ ಎಲ್ಲ ಕವಿಗಳಿಗೂ ನಾಟಕಕಾರರಿಗೂ ವಾಲ್ಮೀಕಿಯೇ ಸ್ಫೂರ್ತಿಸ್ಥಾನ. ಸಾರಸ್ವತ ಸಾಮಗ್ರಿಯಲ್ಲಿ, ವಸ್ತುವಿನ್ಯಾಸದಲ್ಲಿ, ಶೈಲಿಯಲ್ಲಿ, ರಸನಿರೂಪಣೆಯಲ್ಲಿ, ಉಪಮಾ ಚಾತುರ್ಯದಲ್ಲಿ, ಅಲಂಕಾರಗಳ ಬಳಕೆಯಲ್ಲಿ, ಕೃತಿಗಾಂಭೀರ್ಯದಲ್ಲಿ, ವಾಲ್ಮೀಕಿಯೇ ಮೇಲ್ಪಂಕ್ತಿ. ಮಾಧುರ್ಯದಲ್ಲಿ ಪ್ರತಿಭೆಯಲ್ಲಿ ಅವರನ್ನು ಅತಿಕ್ರಮಿಸಿದ ಕವಿ ಇಂದಿಗೂ ಬಂದಿಲ್ಲ!
ಶ್ರೀ ಗಜಾನನ ಶರ್ಮಾ ಅವರು ವಾಲ್ಮೀಕಿಯಂಥ ಮಹಾಕವಿಯನ್ನು ಸರಳವಾಗಿಯೂ ಅಸಂದಿಗ್ಧವಾಗಿಯೂ ಪರಿಚಯಿಸಿಕೊಟ್ಟಿದ್ದಾರೆ. ವಾಲ್ಮೀಕಿಯ ಕಾವ್ಯಾಂತರಂಗವನ್ನು ನಮಗೆ ಉಣಬಡಿಸಿದ್ದಾರೆ. ಪಾತ್ರೆಯೇನೊ ಕಿರಿದು. ಆದರೆ, ಲೇಖಕರ ಭಾವ ಮಾತ್ರ ಹಿರಿದು. ಹೀಗಾಗಿ ವಾಲ್ಮೀಕಿಮಹರ್ಷಿಗಳ ಭಾವಬಂಧುರತೆಯನ್ನು, ಅವರನ್ನು ಕುರಿತ ಚೂಲಮೂಲಗಳನ್ನು ಈ ಕಿರುಕೃತಿಯಲ್ಲಿ ಪೃಥಕ್ಕರಿಸಿ ನಮಗೆ ನೀಡಿದ್ದಾರೆ.
ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ
ವಿಶ್ರಾಂತ ಕುಲಪತಿ