ಮಹರ್ಷಿ ಶಂಖ-ಲಿಖಿತರು/ Maharshi shanka – likhitharu
‘ಮಹಾರಾಜ, ನನ್ನಿಂದ ಅಧರ್ಮ ನಡೆದಿದೆ. ನನಗೆ ಶಿಕ್ಷೆ ಕೊಡಿʼ ಎಂದು ಲಿಖಿತರು ಸುದ್ಯುಮ್ನ ರಾಜನನ್ನು ಪ್ರಾರ್ಥಿಸುವುದೇ ಧರ್ಮಾಚರಣೆಯ ಉತ್ತುಂಗ. ಕಲಿಯುಗದಲ್ಲಿ ಧರ್ಮಾಚರಣೆಯು ಬಹು ಕಷ್ಟವಾದದ್ದು. ಇಲ್ಲಿ ಅಧರ್ಮ ತಾಂಡವವಾಡುವುದು ಸಹಜ ಎನ್ನುವುದು ಪಂಡಿತರು ಆಡುವ ಮಾತು. ಸಹಜ ಎಂದದ್ದನ್ನು ಒಪ್ಪಿಕೊಂಡು ನಡೆಯುವುದಾದರೆ ಈ ನಾಡಿನಲ್ಲಿ ಮಹಾಪುರುಷರು ಏಕೆ ಜನಿಸುತ್ತಿದ್ದರು? ದಿನನಿತ್ಯವೂ ಇಲ್ಲಿ ಧರ್ಮ-ಅಧರ್ಮದ ನಡುವಿನ ಸಂಘರ್ಷ. ನಾನು ಜಗಕ್ಕೆಲ್ಲ ಬೆಳಕು ನೀಡಲಾರೆನಾದರೂ ನನ್ನ ಸುತ್ತಲಿನ ಕತ್ತಲನ್ನು ದೂರಗೊಳಿಸುವ ಹಂಬಲವೇ ಧರ್ಮ ರಕ್ಷಣೆಗೆ ದಾರಿದೀಪ.
ಶಂಖ-ಲಿಖಿತರ ಕುರಿತು ಮಾಹಿತಿಗಳ ಕೊರತೆಯ ನಡುವೆಯೂ, ಲಭ್ಯ ಮಾಹಿತಿಗಳ ಆಧಾರದಲ್ಲೇ ಅವರ ವ್ಯಕ್ತಿತ್ವವನ್ನು, ಧರ್ಮಾಚರಣೆಯ ಮಾರ್ಗವನ್ನು ಸೂಕ್ತವಾಗಿ ಕಟ್ಟಿಕೊಡುವ ಕೃತಿ ‘ಮಹರ್ಷಿ ಶಂಖ-ಲಿಖಿತರುʼ.
-ರಮೇಶ ದೊಡ್ಡಪುರ
ಸಂಪಾದಕ, ವಿಕ್ರಮ ವಾರಪತ್ರಿಕೆ