ಶ್ರೀಪರಶುರಾಮ/Shreeprashurama
ಬ್ರಾಹ್ಮಣನಾಗಿ ಹುಟ್ಟಿ, ಕ್ಷತ್ರಿಯನಾಗಿ ಬದುಕಿ, ಲೋಕಕಲ್ಯಾಣ ಹಾಗೂ ಧರ್ಮರಕ್ಷಣೆಗಾಗಿ ಶ್ರಮಿಸಿದ ಅವತಾರಪುರುಷ ಪರಶುರಾಮ. ಪುರಾಣಲೋಕದ ಅತ್ಯಂತ ಕುತೂಹಲಕರ ವ್ಯಕ್ತಿತ್ವ.
ಮಕ್ಕಳಿಗೂ ಸುಲಭವಾಗಿ ಅರ್ಥವಾಗುವಂತೆ ಹಾಗೂ ಹಿರಿಯರಿಗೆ ಮರೆತಿದ್ದರೆ ಪುನಃ ನೆನಪಿಸುವಂತೆ ಭಾರ್ಗವರಾಮನ ಬದುಕನ್ನು ಈ ಪುಟ್ಟ ಕೃತಿಯಲ್ಲಿ ವಿದ್ವಾನ್ ಗಣೇಶ ಭಟ್ಟರು ಮನೋಜವಾಗಿ ಕಟ್ಟಿಕೊಟ್ಟಿದ್ದಾರೆ.
ವಿದ್ವಾನ್ ಕೆ.ಎಲ್.ಶಂಕರನಾರಾಯಣ ಜೋಯಿಸರ ಮುನ್ನುಡಿ ಇದರ ಇನ್ನೊಂದು ಹೆಚ್ಚುಗಾರಿಕೆ. ಕೊಡಲಿ ಹಿಡಿದು ಭೂಮಂಡಲವನ್ನು ಸುತ್ತಿದ ವಿಕ್ಷಿಪ್ತ ವೀರ ಮತ್ತು ಆನನ್ಯ ತತ್ತ್ವಜ್ಞಾನಿಯ ಜೀವಿತದ ಒಳನೋಟಗಳನ್ನು ಅರಿಯಲು ಹೇಳಿಮಾಡಿಸಿದ ಹೊತ್ತಿಗೆಯಿದು.
ಮಹಾಬಲ ಸೀತಾಳಭಾವಿ
ಲೇಖಕ