ಶ್ರೀಪಿಂಗಲಾಚಾರ್ಯ/ Sreepingalacharya
ಪಿಂಗಳಾಚಾರ್ಯ
ಭಾರತೀಯ ವೇದ ಶಾಸ್ತ್ರ ಕಾವ್ಯ ಪರಂಪರೆಯಲ್ಲಿ ಕರ್ತೃವಿಗಿಂತ ಕೃತಿಯೇ ಮುಖ್ಯವಾಗಿರುತ್ತಿತ್ತು ಎನ್ನುವುದಕ್ಕೆ ಪಿಂಗಳಾಚಾರ್ಯರ ಕಥೆ ಬಹುದೊಡ್ಡ ನಿದರ್ಶನ.
ಅಂದಿನ ರಚನಾಕಾರರು ಕಾವ್ಯಸೃಷ್ಟಿಯ ಶ್ರೇಷ್ಠತೆಯಲ್ಲಿ ತಮ್ಮ ಛಾಪನ್ನು ಬಿಡುತ್ತಿದ್ದರೇ ವಿನಃ ಎಲ್ಲಿಯೂ ತಮ್ಮ ಹೆಸರನ್ನು ಮೆರೆಸುವ ಸಹಿ ಹಾಕಿಹೋಗುತ್ತಿರಲಿಲ್ಲ ಎನ್ನುವುದಕ್ಕೆ ಪಿಂಗಳರು ಬಹುದೊಡ್ಡ ಸಾಕ್ಷಿ.
ಕಾವ್ಯ ರಚನೆಗೆ ಮೂಲದ್ರವ್ಯವಾದ ಛಂದಸ್ಸನ್ನು ಕಟ್ಟಿಕೊಟ್ಟು ಮುಂದಿನ ರಚನಕಾರರಿಗೆ ದಾರಿದೀಪವಾದ, ಅವರ ಕೃತಿಗಳನ್ನು ಚೆಂದಗೊಳಿಸಿದ ಲಯಬದ್ಧಗೊಳಿಸಿದ, ಹದವಾಗಿಸಿದ ಕೀರ್ತಿ ಪಿಂಗಳಾಚಾರ್ಯರದ್ದು. ಇವರ ಬಗ್ಗೆ ತಿಳಿದುಕೊಳ್ಳುವ ಕುತೂಹಲವನ್ನು ಸ್ವಲ್ಪಮಟ್ಟಿಗಾದರೂ ಈ ಕೃತಿ ತಣಿಸುತ್ತದೆ.
ಗುರುವರ್ಯರನ್ನು ನಮಗೆ ಪರಿಚಯಿಸಿಕೊಟ್ಟ ವಿದ್ವಾನ್ ಸುಬ್ರಹ್ಮಣ್ಯ ಭಟ್ಟ ಗುಂಡಿಬೈಲುರವರಿಗೂ, ಭಾರತೀ ಪ್ರಕಾಶನಕ್ಕೂ ಅನಂತಾನಂತ ವಂದನೆಗಳು.
-ಎನ್. ರವಿ ಶಂಕರ್