ಶ್ರೀಭಾರತೀಕೃಷ್ಣತೀರ್ಥರು /Shreebharatikrushnateertharu
ಭಾರತದ ಜ್ಞಾನಪರಂಪರೆ ಸಮೃದ್ಧವಾದುದು. ನಮ್ಮ ಪುರಾಣ ಹಾಗೂ ಪ್ರಾಚೀನ ಗ್ರಂಥಗಳಲ್ಲಿರುವ ಜ್ಞಾನವನ್ನು ಜನಸಾಮಾನ್ಯರಿಗೆ ತಿಳಿಸುವ ಕಾರ್ಯ ಮಾಡಿದ ಮಹಾಪುರುಷರದಲ್ಲಿ ಪುರಿಯ ಗೋವರ್ಧನ ಪೀಠದ ಶಂಕರಾಚಾರ್ಯರಾಗಿದ್ದ ಶ್ರೀಭಾರತೀಕೃಷ್ಣತೀರ್ಥರೂ ಒಬ್ಬರು. ವೇದಗಣಿತವನ್ನು ಸರಳೀಕರಿಸಿದ ಕೀರ್ತಿ ಅವರದ್ದು. ವಿಸ್ಮಯಕಾರಿ ವೇದಗಣಿತದ ಸಂಶೋಧನೆ ಮತ್ತು ಮನುಕುಲದ ಸೇವೆಯ ಮೂಲಕ ಆದರ್ಶ ಸಂತರಾದವರು ಅವರು.
ಈ ಕಿರುಹೊತ್ತಗೆ ಅವರ ಬಾಲ್ಯ, ಅಧ್ಯಯನ, ಸಂನ್ಯಾಸ, ಧಾರ್ಮಿಕ ಸಾಧನೆಗಳ ಬಗ್ಗೆ ಮಾಹಿತಿ ಒದಗಿಸುತ್ತದೆ.
ವಿನಾಯಕ ಭಟ್ಟ ಮೂರೂರು
ಸಮೂಹ ಸಂಪಾದಕ, ಹೊಸದಿಗಂತ