ಸಂತ ತುಳಸಿದಾಸ / Santha tulasidaasa
ಯುಗಯುಗಗಳು ಕಳೆದರೂ ರಾಮಾಯಣ, ಮಹಾಭಾರತಗಳು ಯಾವ ಕಾಲಕ್ಕೂ ಸಲ್ಲುವಂಥ ಅಪೂರ್ವ ಮಹಾಗ್ರಂಥ ಮಹತ್ವ. ಬದಲಾದ ಕಾಲಮಾನವನ್ನು ಪ್ರತಿನಿಧಿಸುವ ದಿಕ್ಸೂಚಿಯಂತೆ ಅಲ್ಲಿನ ಪಾತ್ರಗಳು, ಕತೆಗಳು, ಉಪಕತೆಗಳು ಪದೇ ಪದೇ ನಮ್ಮ ದೈನಂದಿನ ಜೀವನದಲ್ಲಿ ಎದುರಾಗುವ ಅಗತ್ಯ ಪಾಠಗಳನ್ನು ಕಲಿಸುತ್ತಲೇ ಇರುತ್ತವೆ. ಇಲ್ಲವೇ ಈ ಕೃತಿಗಳು ಆಯಾ ಕಾಲಕ್ಕೆ ತಕ್ಕಂತೆ ಮತ್ತೆ ಮತ್ತೆ ಹುಟ್ಟುತ್ತಾ ಇರುತ್ತವೆ. ಸಂತ ತುಳಸೀದಾಸರು ರಾಮಾಯಣವನ್ನು ಹೀಗೆ ಮತ್ತೊಮ್ಮೆ ರಚಿಸಿ ನಮ್ಮೆಲ್ಲರ ಗೌರವಕ್ಕೆ ಪಾತ್ರರಾದವರು.
ಅವರ ಕುರಿತಾದ ಈ ಪುಸ್ತಕ ಅವರ ಬದುಕನ್ನು ಸರಳ – ಸುಂದರವಾಗಿ ಚಿತ್ರಿಸುತ್ತದೆ.
– ಅನಂತ ಕುಣಿಗಲ್