ಸಂತ ಶೇಷಾಚಲ/ Santha sheshachala
ಸಂತರು ಭಾರತದ ಅಂತರಾಳ, ಅಂತಃಸತ್ತ್ವ, ಅರಿವು. ಅಂದೆಂದಿನಿಂದ ಸಾವಿರಾರು ಸಂತರು ಭಾರತದಲ್ಲಿ ಜನ್ಮತಳೆದು ಜ್ಞಾನದ ಹರಿವಿಗೆ ದ್ವಾರವಾಗಿದ್ದಾರೆ, ದಾರಿ ತೋರಿದ್ದಾರೆ. ಅಂತಹ ದಿವ್ಯಚೇತನಗಳಲ್ಲೊಬ್ಬರು ಸಂತ ಶೇಷಾಚಲರು.
ಆಕಾಶದಿಂದ ಇಳಿದ ಹನಿಯೊಂದು ಆಕಾಶಕ್ಕೇ ಸೇರುವಂತೆ ಚಿದಂಬರರಿಂದ ಪ್ರಾರಂಭಿಸಿ ಮತ್ತೆ ಚಿದಂಬರವನ್ನು ಸೇರುವ ಚರಿತೆಯಿದು. ಗುರುವಿನ ಗರಿಮೆಯನ್ನು-ಗುರುಸೇವೆಯ ಹಿರಿಮೆಯನ್ನು ಸಾರಿ, ಸದ್ಧರ್ಮ-ಸದಾಚಾರಗಳನ್ನು ಜೀವಿಸಿ, ತನ್ಮೂಲಕ ಬೋಧಿಸಿದ ಅಚಲ ವ್ಯಕ್ತಿತ್ವ ಅವರದ್ದು. ಇಹದ ಸೇವೆಯಿಂದಲೇ ಪರವನ್ನು, ಪರಂಜ್ಯೋತಿಯನ್ನು ಸಾಧಿಸಿದವರು ಶೇಷಾಚಲರು. ಈ ಪುಸ್ತಕ ಇಲ್ಲಿಯ ಜೀವನಕ್ಕೆ ಮಾರ್ಗಸೂಚಿ, ಪರತತ್ತ್ವ ಸಾಧನೆಗೆ ಪ್ರೇರಣೆ.
ಕೃತಿಕಾರರಿಗೆ ಅಭಿನಂದನೆ. ಅರವತ್ತು ಗುರುಗ್ರಂಥದ ಮೂಲಕ ಪರಮಗುರಿಯನ್ನು ಬೋಧಿಸಹೊರಟ ಮಾಲಿಕೆಯ ಕರ್ತೃವಿಗೆ ಅಭಿವಂದನೆ.
ಸಚಿನ್ ಎಲ್. ಎಸ್.