Sachin LS

Sachin LS
ಪ್ರೀತಿಯ Jagadisha Sharma Sampa ,
ಇಡೀ ಜಗತ್ತು ಇದೇ ಧರ್ಮ ಎಂದು ಹೇಳುತ್ತ ಧರ್ಮದ ಕುರಿತು ಮಾಹಿತಿ ಸಾರುವ, ಧರ್ಮದ ಹೆಸರಿನಲ್ಲಿ ಸಮಾಜ ಹೊತ್ತಿ ಉರಿಯುವ ಈ ಸಮಯದಲ್ಲಿ ತಣ್ಣಗೆ ನಿಜ ಧರ್ಮದ ಅರಿವನ್ನು ಮೂಡಿಸಹೊರಟ ಕೃತಿಯಿದು. ಒಂದು ಗಂಟೆಯಲ್ಲಿ ಇಡಿಯ ಜನ್ಮಕ್ಕೆ ಬೇಕಾಗುವಷ್ಟು ಕಲಿಯುವ ಸರಕನ್ನು ನೀಡಿರುವ ಪುಸ್ತಕವಿದು. ಧರ್ಮದ ಹತ್ತು ಮೆಟ್ಟಿಲುಗಳನ್ನು ಕಟ್ಟಿಕೊಟ್ಟು, ನಾವೂ ಧರ್ಮವಂತರಾಗಬಹುದಾದ ದಾರಿಯನ್ನು ತೆರೆದಿಟ್ಟಿದ್ದಾರೆ. ಪುಟ್ಟ ಕಥೆಗಳು ಧರ್ಮದ ಪ್ರಾಯೋಗಿಕತೆಯನ್ನು ಮನಸ್ಸಿಗಿಳಿಸುವ ಕೆಲಸ ಮಾಡಿದೆ. ಕೆಲವು ಕಥೆಗಳನ್ನು ಕೇಳಿದ್ದೇವೆ, ಆದರೆ ಹೀಗೊಂದು ಆಯಾಮವಿದೆ ಎಂದು ತಿಳಿಸಿದೆ. ಹೊರಬದುಕಿಗೆ, ಒಳಬೆಳಕಿಗೆ ಪೋಷಕ ಧರ್ಮ.
ಇಂತಹ ಪುಸ್ತಕಕ್ಕೆ ಧನ್ಯವಾದ
#ಜಸ್ಟ್1ಗಂಟೆ #ಧರ್ಮ #ಪುಸ್ತಕ #ಅನಿಸಿಕೆ