ಅಂದಿಗಷ್ಟು ಇಂದಿಗಿಷ್ಟು | Andigaṣṭu Indigiṣṭu
ಇದು ಧರ್ಮಭಾರತಿಯ ಓದುಗರನ್ನು ಹದಿನೈದು ವರ್ಷಗಳ ಕಾಲ ಪ್ರತಿತಿಂಗಳೂ ಕಾಯುವಂತೆ ಮಾಡಿದ್ದ ವಿದ್ವಾನ್ ಜಗದೀಶ ಶರ್ಮರ ಸಂಪಾದಕೀಯ ಬರಹಗಳ ಸಂಗ್ರಹ.
ಹದಿನೈದು ವರ್ಷಗಳಷ್ಟು ದೀರ್ಘಕಾಲದಲ್ಲಿ ಬರೆದ ಬರಹಗಳಾದರೂ ಇಲ್ಲಿಯ ಲೇಖನಗಳಲ್ಲಿ ನಿಖರವಾದ ನಿಲುವಿದೆ. ಮೊದಲನೇ ಬರಹ ಹೇಳಿದ್ದೊಂದಾದರೆ ಕಡೆಯದ್ದು ಹೇಳಿದ್ದು ಇನ್ನೊಂದು ಎಂಬಂತಾಗಿಲ್ಲ. ವಿಷಯಗಳ ಆಯ್ಕೆಯ ಹಂದರವಂತೂ ‘ಅಬ್ಬಾ’ ಎನ್ನುವಂತಿದೆ. ಲಾಲಿತ್ಯಪೂರ್ಣ ಭಾಷೆ, ಗಂಭೀರ ನಿರೂಪಣೆ, ಸದ್ಧರ್ಮವನ್ನು ಸಾರಬೇಕೆಂಬ ಅದಮ್ಯ ತುಡಿತ; ಅಂತರ್ಗತ ಜೀವಪರ ಕಾಳಜಿ, ಗುರುವಿತ್ತ ವಿಷಯವನ್ನು ಕುಂದಿಲ್ಲದೇ ಶಬ್ದಗಳಲ್ಲಿಡುವ ಕುಶಲತೆ ಇವೆಲ್ಲವೂ ಈ ಪುಸ್ತಕವನ್ನು ಬಹು ಎತ್ತರಕ್ಕೆ ಕೊಂಡೊಯ್ದಿವೆ.
ಎಲ್ಲಕ್ಕಿಂತ ಮುಖ್ಯವಾಗಿ, ಪ್ರತಿ ಬರಹಗಳಲ್ಲೂ ಅನುಸ್ಮೃತವಾಗಿರುವ, “ಅಂದಿಗೆ ಅಷ್ಟು’ ಎನ್ನಲ್ಪಟ್ಟದ್ದು ಇಂದಿಗೂ ಅಷ್ಟಲ್ಲ… ಅದು ಇಷ್ಟಾದೀತು” ಎಂದು ಹೇಳಲು ಅವಶ್ಯವಾದ ಧೈರ್ಯ, ಬದ್ಧತೆ, ಚಾತುರ್ಯಗಳು ಪುಸ್ತಕವನ್ನು’ ಓದಲೇಬೇಕಾದ್ದು’ ಎನಿಸುವ ಹಾಗೆ ಮಾಡಿವೆ.
- ಮಧು ದೊಡ್ಡರಿ