Bhagavatpada SriShankaracharyaru | ಭಗವತ್ಪಾದ ಶ್ರೀಶಂಕರಾಚಾರ್ಯರು

Bhagavatpada SriShankaracharyaru | ಭಗವತ್ಪಾದ ಶ್ರೀಶಂಕರಾಚಾರ್ಯರು

ಪ್ರಕಾಶಕರು : ಶ್ರೀಭಾರತೀ ಪ್ರಕಾಶನ
ಪ್ರಕಾಶಿತ ವರ್ಷ : 2024
ಭಾಷೆ : ಕನ್ನಡ
Buy book using below links

ಭಾರತವರ್ಷ ವೈದಿಕೇತರ ಮತಗಳಿಂದಾಗಿ ನಲುಗಿ ಬೆಂಡಾದ; ಆಲಸ್ಯ, ಜಡತೆ, ಮೌಢ್ಯಗಳೇ ತುಂಬಿದ್ದ; ಬಾಹ್ಯಾಚಾರಗಳು ಮತ್ತು ವಿವೇಕರಹಿತ ಜೀವನಕ್ರಮ ಸಾಮಾನ್ಯರಲ್ಲಿ ಆವರಿಸಿದ್ದ; ಸನಾತನ ಧರ್ಮ ದಿಕ್ಕುದೆಸೆಯಿಲ್ಲದಂತೆ ಆದ ಕಾಲಘಟ್ಟದಲ್ಲಿ ಆವಿರ್ಭವಿಸಿ ಬಂದವರು ಶ್ರೀಶಂಕರಾಚಾರ್ಯರು.

ಘನ ವಿದ್ವತ್ತು, ಪ್ರಚಂಡವಾದ ಸಂಕಲ್ಪಶಕ್ತಿ, ಮೇಧಾಶಕ್ತಿ, ಧರ್ಮದ ಬಗೆಗಿನ ಆಳವಾದ ದಿವ್ಯವಾದ ಪ್ರೀತಿ, ಶ್ರದ್ಧೆ, ವಾಕ್ಪಟುತ್ವ, ಎಲ್ಲಕ್ಕಿಂತ ಮಿಗಿಲಾಗಿ ಹೃದಯವಂತಿಕೆ, ಜನರನ್ನು ಸೂಜಿಗಲ್ಲಿನಂತೆ ಆಕರ್ಷಿಸುವ ಸ್ಫುರದ್ರೂಪಗಳ ಅಸಾಮಾನ್ಯ ವ್ಯಕ್ತಿತ್ವ ಆಚಾರ್ಯರದ್ದು.

ವ್ಯಕ್ತಿಗತ ಜಂಜಡಗಳಿಂದ ಮುಕ್ತಿಪಡೆದು ಜಗತ್ತಿನ ಜಂಜಡಗಳನ್ನು ಅಂಟಿಸಿಕೊಂಡು, ಅವುಗಳಿಗೆ ಎದೆಗೊಟ್ಟು ಹೋರಾಡಿ, ವಿಜಯದುಂದುಭಿ ಮೊಳಗಿಸಿ, ಭರತವರ್ಷವನ್ನು ಎತ್ತಿ ನಿಲ್ಲಿಸಿ, ಇಂದಿಗೂ ಎಂದೆಂದಿಗೂ ದುರಾಕ್ರಮಣಗಳನ್ನು ಎದುರಿಸುವ ಆತ್ಮಸ್ಥೈರ್ಯವನ್ನು ಜನಮಾನಸದಲ್ಲಿ ಬಿಟ್ಟುಹೋದ ಮಹಾನ್ ತೇಜಸ್ವಿ, ಓಜಸ್ವಿ, ತಪಸ್ವಿ, ಮಹಾನ್ ಚೈತನ್ಯ ಆಚಾರ್ಯರು.

ಪ್ರಕೃತ ಇಲ್ಲಿ ವಿದ್ವಾಂಸರೂ ಜನಪ್ರಿಯ ಲೇಖಕರೂ ಆದ ಜಗದೀಶಶರ್ಮರು ಆಚಾರ್ಯರ ಆ ದಿವ್ಯ-ಭವ್ಯ ಚರಿತ್ರೆಗೆ ಅಕ್ಷರರೂಪ ನೀಡಿದ್ದಾರೆ. ಇದು ಹೃದಯಂಗಮವೂ, ಚೇತೋಹರವೂ, ವಿಚಾರಪ್ರಚೋದಕವೂ ಆಗಿದೆ.

ಗೋಪಾಲಕೃಷ್ಣ ಶರ್ಮಾ

Leave a Reply

Your email address will not be published. Required fields are marked *