ಭಗವದ್ಗೀತೆ | Bhagavdgeete
ಪ್ರತಿಯೊಬ್ಬರ ಬದುಕಿಗೂ ಬೇಕಾಗಿರುವ ಗ್ರಂಥ ಭಗವದ್ಗೀತೆ. ಭವದ ಬೇಗುದಿಯನ್ನು ಶಮನ ಮಾಡುವ ಮಹಾಗ್ರಂಥ. ಇಲ್ಲಿ ಅದನ್ನು ಪುಟ್ಟ ಪುಸ್ತಕದಲ್ಲಿ ವಿವರಿಸಲಾಗಿದೆ.
ಅಂಗೈಯಷ್ಟಗಲದ ಈ ಕೃತಿ ಹೇಳುವುದೇನನ್ನು ಎಂದರೆ…
ಜಗತ್ತಿಗೂ ವ್ಯಕ್ತಿಗೂ ಇರುವ ಸಂಬಂಧವನ್ನು ವಿಶದಪಡಿಸುತ್ತದೆ.
ವ್ಯಕ್ತಿ ಅಸೀಮವಾಗುವುದನ್ನು ಹೇಳಿಕೊಡುತ್ತದೆ.
ಯಶಸ್ಸಿನ ಮಹಾಮಂತ್ರವನ್ನು ಉಪದೇಶಿಸುತ್ತದೆ.
ಮಂಡಿಯೂರಿ, ತಲೆ ತಗ್ಗಿಸಿ, ಉಸಿರುಗಟ್ಟಿ, ಕೈ ಚೆಲ್ಲಿ ಕುಳಿತ ಅರ್ಜುನನಿಗೆ ಪ್ರಚೋದನೆಯನ್ನು ಕೊಟ್ಟ ಗೀತೆ. ಬದುಕಿನ ಎಷ್ಟೋ ಸಂಕಟಗಳನ್ನು ಎದುರಿಸುವವರಿಗೆ ಇದು ಸುಖದ ಗೀತೆಯೂ ಆಗಿದೆ.
ಬದುಕು ಹೇಗೆ ಸಹಜವೋ ಸಾವೂ ಅಷ್ಟೇ ಸಹಜ, ಸಾಯುವುದು ದೇಹವೇ ಹೊರತು ಆತ್ಮವಲ್ಲ, ನರಕಕ್ಕಿರುವ ಮೂರು ದಾರಿಗಳು- ಹೀಗೆ ಭಗವದ್ಗೀತೆ ಹೇಳುವ ಅತಿಗಂಭೀರ ವಿಚಾರವನ್ನು ಎಲ್ಲರಿಗೂ ಅರ್ಥವಾಗುವಂತೆ ಸರಳವಾಗಿ ವಿವರಿಸುವ ಕೃತಿ ಇದು.
- ಲೋಹಿತ ಹೆಬ್ಬಾರ್