ಭೀಷ್ಮ ಹೇಳಿದ ಮ್ಯಾನೇಜ್ ಮೆಂಟ್ ಕಥೆಗಳು | Bheeshma Helida Management Kathegalu

ಅವನು ಎಂಟು ನೂರು ವರ್ಷಗಳ ಸುದೀರ್ಘ ಕಾಲ ಬದುಕಿದ್ದ. ಆರಕ್ಕೂ ಹೆಚ್ಚು ತಲೆಮಾರುಗಳನ್ನು ಕಂಡಿದ್ದ. ಅದಕ್ಕೂ ಹಿಂದೆ ಅವನದ್ದು ದೇವಮಾನದ ಆಯುಷ್ಯ. ಅದೂ ಮೇಲಿನ ಲೋಕದಲ್ಲಿ.
ಒಟ್ಟಿನಲ್ಲಿ ಅವನು ಲೆಕ್ಕ ಹಾಕಲು ಸಾಧ್ಯವಾಗದಷ್ಟು ಕಾಲ
ಲೋಕಲೋಕಾಂತರದ ಬದುಕನ್ನು ಅನುಭವಿಸಿದ್ದ.
ಅವನು ಕಲಿತದ್ದಂತೂ ಯುಗಯುಗಗಳ ಕಾಲ ಜಗತ್ತಿಗೆ ಕಲಿಸಿದವರಲ್ಲಿ. ಒಡನಾಡಿದ್ದು, ಗುದ್ದಾಡಿದ್ದು ಯಾವುದೂ ಸಾಮಾನ್ಯರ ಜೊತೆಯಲ್ಲ.
ಅಂತವನು ಕ್ಷಣಕ್ಷಣವೂ ಚುಚ್ಚುವ ಬಾಣಗಳ ಮೇಲೆ ಸಾವನ್ನು ಕಾಯುತ್ತಾ ಮಲಗಿದ್ದ. ಆಗ ಅವನಲ್ಲಿ ಮುಂದಿನ ಸಾರ್ವಭೌಮ ಆಡಳಿತದ ಮಾರ್ಗದರ್ಶನ ಕೇಳಿದ.
***
ಭೀಷ್ಮ ಹೇಳುತ್ತಾ ಹೋದ…
ಬನ್ನಿ, ಧರ್ಮರಾಜನೊಂದಿಗೆ ನಾವೂ ಅದನ್ನು ಕೇಳೋಣ.