ನವೀನಕೃಷ್ಣ ಎಸ್. ಉಪ್ಪಿನಂಗಡಿ
ನವೀನಕೃಷ್ಣ ಎಸ್. ಉಪ್ಪಿನಂಗಡಿ

ದಶಕಂಠ ರಾವಣ – ಜಗದೀಶ ಶರ್ಮಾ ಸಂಪ ವಿಶ್ರವಸ್-ಕೈಕಸಾ ದೇವಿಯ ಸಂಜಾತ. ಬ್ರಹ್ಮನ ಮರಿಮಗ. ಪೌಲಸ್ತ್ಯ ವಂಶದ ಕುಡಿ. ಭಯಾ-ಹೇತಿ, ಪ್ರಹೇತಿ, ಸಾಲಕಟಂಕಟಾ-ವಿದ್ಯುತ್ಕೇಶರ ವಂಶದಲ್ಲಿ ಜನಿಸಿದ ಕೈಕಸಾ ದೇವಿಯ ಸುಪುತ್ರ. ಅತುಲ ಪರಾಕ್ರಮಿ. ಬಲಿಷ್ಠ, ಸಮರ್ಥ. ಮೂರು ಲೋಕವನ್ನೇ ನಡುಗಿಸಬಲ್ಲ ಪ್ರಚಂಡ ಸಾಮರ್ಥ್ಯ ಹೊಂದಿದ್ದ ರಣವಿಕ್ರಮಿ. ಆದರೆ ದುಷ್ಟತನ, ಸ್ತ್ರೀ ಲೋಲುಪತೆ, ಕಪಟತನ, ದುರ್ಬುದ್ಧಿ, ಅಹಂಕಾರದಿಂದ ತನ್ನ ಸಾವನ್ನು ತಾನೇ ಬರಸೆಳೆದವ. ಇಂತಿಪ್ಪ ದಶಕಂಠನ ಸಮಗ್ರ ಕಥೆಯನ್ನು ತಿಳಿಸುವ ಪುಸ್ತಕ ‘ದಶಕಂಠ ರಾವಣ’. ರಾವಣನ ವ್ಯಕ್ತಿತ್ವ ನಮಗೆ

Read More
ಗೋಪಾಲಕೃಷ್ಣ ಕುಂಟಿನಿ.
ಗೋಪಾಲಕೃಷ್ಣ ಕುಂಟಿನಿ.

ಗೆಳೆಯ ಜಗದೀಶ ಶರ್ಮಾ ಮಹಾಭಾರತದ ಒಳಗೆ ಹೊಕ್ಕವರು ಇನ್ನೂ ಹೊರಬಂದಂತಿಲ್ಲ. ಸದ್ಯಕ್ಕೆ ಅವರು ಬರುವುದೂ ಇಲ್ಲ. ಅಧ್ಯಯನಶೀಲತೆ ಒಂದು ಮಹಾಕೃತಿಯನ್ನು ಹಾಗೇ ಒಳಗೊಳಿಸುತ್ತದೆ. ಅಥವಾ ಇದನ್ನು ಹೀಗೂ ಹೇಳಬಹುದು, ತನ್ನೊಳಗೆ ಬಂದ ನಿಜದ ಓದುಗನನ್ನು ಮಹಾಕೃತಿ ಬೀಳ್ಕೊಡುವುದೇ ಇಲ್ಲ. ‘ಕುಂತಿ ಪಾಂಡು’ ಪುಸ್ತಕ ಓದಿದೆ. ಮಹಾಭಾರತದಲ್ಲಿ ಮರೆಯಲಾಗದ ಎರಡು ಪಾತ್ರಗಳಿವು. ಗಂಡ ಹೆಂಡತಿ. ಇಬ್ಬರನ್ನೂ ಸಾಯುವ ತನಕ ಕಾಡಿದ ದ್ವಂದಗಳು. ಯಾವುದು ಸರಿ ಯಾವುದು ತಪ್ಪು ಎಂದು ಗೊತ್ತೇ ಆಗದೆ ಅವರಿಬ್ಬರೂ ಬದುಕಿದರು. ಕುಂತಿಗೆ ತನ್ನ ದ್ವಂದ

Read More
Jogi Girish Rao Hatwar
Jogi Girish Rao Hatwar

ಕುಂತಿ ರಾಜಮಾತೆಯಾಗಿದ್ದರೂ ಆಕೆಯ ಪಾತ್ರ ದಟ್ಟವಾಗಿ ಬರುವುದು ಮೂರು ಸಂದರ್ಭದಲ್ಲಿ. ಗಂಗಾತೀರದಲ್ಲಿ ಇನತನಯನನ್ನು ಭೇಟಿಯಾಗುವ ಸಂದರ್ಭ, ಕರ್ಣನಿಗೆ ಜನ್ಮವಿತ್ತ ಸಂದರ್ಭ, ಪಾಂಡವರ ಮದುವೆಯ ಪ್ರಸಂಗ. ಮಿಕ್ಕಂತೆ ಆಕೆ ಬಹುತೇಕ ನಿರ್ಲಿಪ್ತೆ. ಮಹಾಭಾರತದಲ್ಲಿ ಪಾಂಡುವಿನ ಪಾತ್ರ ಕುಂತಿಗಿಂತಲೂ ಕಡಿಮೆ. ಬಿಳಿಚಿಕೊಂಡು ಹುಟ್ಟಿದ ಪಾಂಡು, ತಾನೇ ಮಾಡಿದ ತಪ್ಪಿಗೋಸ್ಕರ ಕಾಡಿಗೆ ಹೋಗಿ, ಅಲ್ಲಿದ್ದುಕೊಂಡು, ಪತ್ನಿಯರಿಗೆ ನಿಯೋಗದ ಮೂಲಕ ಮಕ್ಕಳನ್ನು ಕರುಣಿಸಿ, ಕೊನೆಗೆ ತನ್ನದೇ ವಾಂಛೆಗೆ ಬಲಿಯಾಗುತ್ತಾನೆ. ಇವರಿಬ್ಬರ ಕತೆಯನ್ನು ಜಗದೀಶ ಶರ್ಮಾ ಸಂಪ ಅವರು ವಿಸ್ತಾರವಾಗಿ ಬರೆದಿದ್ದಾರೆ. ಈ ಎರಡು

Read More
Rachana Soma
Rachana Soma

ಹಿರಿಯ ಮತ್ತು ಅನುಭವಿ ಲೇಖಕರು, ವಿದ್ವಾನ್ ಜಗದೀಶ್ ಶರ್ಮ ಸಂಪ ಅವರ ರಾಮಾಯಣ ಮತ್ತು ಮಹಾಭಾರತದ ಬಗೆಗಿನ, ಅವುಗಳ ಪಾತ್ರಗಳ ಬಗ್ಗೆ ವಿಭಿನ್ನ ದೃಷ್ಟಿಕೋನದಿಂದ ಬರೆದ ಪುಸ್ತಕಗಳನ್ನು ಓದುವ, ಅದಕ್ಕಾಗಿ ಕಾಯುವ ಓದುಗರ ಸಾಲು ಸಾಲೇ ಇದೆ. ಅವರ ಬಗೆಗೆ ಅತ್ಯಂತ ಗೌರವ ಇಟ್ಟ ಅಭಿಮಾನಿಗಳ ಗುಂಪಿನಲ್ಲಿ ನಾನೂ ಒಬ್ಬಳು. ಇಂದು ಅವರ ಕೃತಿ “ಕುಂತಿ ಪಾಂಡು” ಬಿಡುಗಡೆ ಆಗಿದೆ. ಪುಸ್ತಕ ಪ್ರಕಾಶನ ಕಾರ್ಯವನ್ನು ಒಂದು ಸಮರದೋಪಾದಿಯಲ್ಲಿ ನಡೆಸುತ್ತಿರುವ Jameel Sawanna ಅವರು Just 1 ಗಂಟೆ

Read More
ಗುರುಪ್ರಸಾದ್ ಆಚಾರ್ಯ
ಗುರುಪ್ರಸಾದ್ ಆಚಾರ್ಯ

ಓದಿ ಮುಗಿಸಿದ ಪುಸ್ತಕ : ‘ ಧರ್ಮ ‘ ಒಳಹೊರಗಿನ ಬೆಳಕಿಗೆ; ಬವಣೆಯಿಲ್ಲದ ಬದುಕಿಗೆ ಲೇಖಕರು : ಜಗದೀಶ ಶರ್ಮಾ ಸಂಪ ಪ್ರಕಾಶನ : ಸಾವಣ್ಣ ಎಂಟರ್ಪ್ರೈಸಸ್ ಧರ್ಮ ಅನ್ನುವ ಶೀರ್ಷಿಕೆ ನೋಡಿ.. ಅರೆ ಧರ್ಮದ ಬಗೆಗೆ ಇಷ್ಟು ಸಣ್ಣ ಪುಸ್ತಕವೇ..? ಅಂತ ಗೊಂದಲ ಸುರುವಾಗಿತ್ತು.. ಪುಸ್ತಕದಲ್ಲೇ ಇರುವಂತೆ ಒಂದು ಗಂಟೆಯ ಸಮಯದಲ್ಲಿ ಓದಿ ಮುಗಿಸಬಹುದಾದ ಪುಸ್ತಕ.. ( ನಮ್ಮ ಸ್ಪೀಡಿಗೆ ಇನ್ನೊಂದು ತಾಸು ಹೆಚ್ಚೇ ತೆಗೆದುಕೊಂಡೆ ಅನ್ನೋದು ನಮ್ಮ ವೈಫಲ್ಯ ಬಿಡಿ ) ವಾಸ್ತವದಲ್ಲಿ ಇದು

Read More
Rangaswamy Mookanahalli
Rangaswamy Mookanahalli

ಶ್ರೀಲಂಕನ್ನರ ಪ್ರಕಾರ ರಾವಣ ಹೀರೋ , ಸುಭಗ . ರಾಮ ವಿಲನ್ . ಬದುಕು ಅದೆಷ್ಟು ವಿಚಿತ್ರ ಅಲ್ಲವೇ ನಾವು ಏನೇ ಆಗಿರಲಿ ಯಾರೋ ಒಬ್ಬರ ಪಾಲಿಗೆ ವಿಲನ್ ಆಗುವುದಂತೂ ತಪ್ಪುವುದಿಲ್ಲ ! ನಾನು ರಾಮಾಯಣವನ್ನ ಓದಿದವನಲ್ಲ. ನನಗೆ ಸಂಸ್ಕೃತ ಜ್ಞಾನವೂ ಇಲ್ಲ. ಶ್ಲೋಕದ ಕನ್ನಡ ಅರ್ಥವನ್ನ ಓದಿ ಖುಷಿಪಡುವವನು. ನನ್ನಜ್ಜಿ (ಅಮ್ಮನ ಅಮ್ಮ ) ಗಂಗಜ್ಜಿ ರಾಮಾಯಣವನ್ನ ಪೂರ್ಣವಾಗಿ ಬಾಯಿಯಲ್ಲಿ ಹಾಡಿನ ರೂಪದಲ್ಲಿ ಹೇಳುತ್ತಿದ್ದಳು. ಆಕೆಯ ಬಾಯಿಯಲ್ಲಿ ಅದೆಷ್ಟೋ ಪುಣ್ಯ ಪುರುಷರ ಹೆಸರನ್ನ ಕೇಳಿದ್ದೇನೆ. ಅಂತೆಯೇ

Read More
Gajanana Sharma
Gajanana Sharma

ವಾಮನಮೂರ್ತಿ ತ್ರಿವಿಕ್ರಮನಾಗಿ ಅರಳಿದ ಘಳಿಗೆ ನಿನ್ನೆ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ನಲ್ಲಿ ಘಟಿಸಿತು! ಹೌದು, ನಿನ್ನೆ ವರ್ಲ್ಡ್ ಕಲ್ಚರ್ ಸಭಾಂಗಣ ತುಂಬಿ ತುಳುಕಿತ್ತು. ನುರಿತ ವ್ಯವಹಾರ ತಜ್ಞ, ಜಮೀಲ್ ಸಾಹೇಬರು ಹೊರಗೆ ಕುಳಿತು ಟಿ ವಿ ಮೂಲಕ ಸಮಾರಂಭ ನೋಡಲು ವ್ಯವಸ್ಥೆ ಮಾಡಿರದಿದ್ದರೆ ಹಲವರು ಹಾಗೆಯೇ ಹಿಂದಿರುಗಬೇಕಿತ್ತು. ರುಚಿಕಟ್ಟಾದ ಉಪಹಾರದೊಂದಿಗೆ ನಮಗೆಲ್ಲರಿಗೂ ಹೊಟ್ಟೆಯ ಜೊತೆ ಹೃದಯ – ಮನಸ್ಸುಗಳೂ ತುಂಬಿದವು. ನಾಲ್ವರು ಪ್ರಸಿದ್ಧ ಲೇಖಕರ ಮಹತ್ಕೃತಿಗಳೊಂದಿಗೆ ಮಿತ್ರ ವಿದ್ವಾನ್ ಜಗದೀಶ ಶರ್ಮರ ” ಮಹಾಭಾರತ ಹೇಳಿಯೂ ಹೇಳದ್ದು

Read More
Mohan Kumar D N
Mohan Kumar D N

‘ದಶಕಂಠ ರಾವಣ’ ಜಗದೀಶಶರ್ಮ ಸಂಪ ಪುಟಗಳು: 280, ಬೆಲೆ: 350/- ಸಾವಣ್ಣ ನಾಯಕನ ಪಾತ್ರವನ್ನು ನಿಭಾಯಿಸುವುದು ಸಲೀಸು. ಅವನಿಗೆ ಜನ ಮನ್ನಣೆ ಇರುತ್ತದೆ. ಆದರಣೆ ಇರುತ್ತದೆ. ಸಾಮಾಜಿಕ ಸ್ಥಾನ ಭದ್ರವಾಗಿರುತ್ತದೆ. ಆರ್ಥಿಕವಾಗಿ ಇನ್ನೂ ಸುಭದ್ರ. ಹೀಗಾಗಿ ಅವನು ಸುರಕ್ಷಿತ ವಲಯದಲ್ಲಿರುತ್ತಾನೆ. ನಾಯಕನಂತಹ ನಾಯಕನಾಗಬೇಕಾದರೇ, ನಾಲ್ಕು ಜನರಲ್ಲಿ ಹೆಸರು ಗಳಿಸಬೇಕಾದರೇ ಅವನು ವಿಜೃಂಭಿಸಬೇಕು. ಶಕ್ತಿ ಪ್ರದರ್ಶನ ನೀಡಬೇಕು. ಅಸೀಮ ಸಾಹಸವನ್ನು, ಜಾದೂ ರೀತಿಯದ್ದೇನನ್ನೋ ಮಾಡುತ್ತಲೇ ಇರಬೇಕು. ಅದಕ್ಕೆ ಉರುವಲು ಖಳನಾಯಕ ಮತ್ತು ಅವನ ದುಷ್ಟತನ. ನಾಯಕನಂತೆ ಖಳನಾಯಕನಲ್ಲ. ನಾಯಕನಿಗಿರುವ

Read More
Vinay Madhav
Vinay Madhav

ಜ್ಞಾನ, ತರ್ಕ, ವಿತಂಡವಾದ ಮತ್ತು ದಶಕಂಠ ರಾವಣ…. ನಮ್ಮ ಪೌರಾಣಿಕ ಕಥೆಗಳನ್ನು ವಿಶ್ಲೇಷಣಾತ್ಮಕವಾಗಿ ಪುನರ್ಸೃಷ್ಟಿ ಮಾಡುವುದು ಹೊಸದೇನಲ್ಲ. ಹಾಗೆ ನೋಡಿದರೆ, ನಮ್ಮ ಪೌರಾಣಿಕ ಕಥೆಗಳು ಕಾಲ ಕಾಲಕ್ಕೆ ತಕ್ಕಂತೆ ವಿಮರ್ಷೆಗೆ ಒಳಪಟ್ಟ ಕೃತಿಗಳೆಂದರೆ ತಪ್ಪಾಗಲಾರದು. ಆದರೆ, ಇತ್ತೀಚಿನ ದಿನಗಳಲ್ಲಿ, ಪೌರಾಣಿಕ ಕಥೆಗಳಾದ ರಾಮಾಯಣ ಮತ್ತು ಮಹಾಭಾರತಗಳನ್ನು, ಒಂದು ಪಾತ್ರದ ದೃಷ್ಟಿ ಕೋನದಿಂದ, ಆಧುನಿಕ ಪ್ರಪಂಚದ ದೃಷ್ಟಿಕೋನಕ್ಕೆ ಹೊಂದುವಂತೆ ಬರೆಯುವ ಅನೇಕ ಪ್ರಯತ್ನಗಳು ನಡೆದಿವೆ. ಉದಾಹರಣೆಗೆ, ರಾಮಾಯಣವನ್ನು ರಾವಣ, ಮಂಡೋದರಿ, ಊರ್ಮಿಳೆ, ಸೀತೆ ಮುಂತಾದವರ ದೃಷ್ಟಿಕೋನದಿಂದಲೂ, ಮಹಾಭಾರತವನ್ನು ಕರ್ಣ,

Read More
Mallika
Mallika

“ಭಗವದ್ಗೀತೆ” ಪುಸ್ತಕ ಖರೀದಿಸಿದ ಗ್ರಾಹಕರ ಅನಿಸಿಕೆ. #Sripustakam #jagadishasharmasampa #ಜಸ್ಟ್1ಗಂಟೆ #ಭಗವದ್ಗೀತೆ #ಪುಸ್ತಕ #ಅನಿಸಿಕೆ  

Read More
Mahesha Araballi
Mahesha Araballi

2023/Jul/ಪುಸ್ತಕ-98 ದಶಕಂಠ ರಾವಣ – ಜಗದೀಶಶರ್ಮಾ ಸಂಪ Jagadisha Sharma Sampa Jameel Sawanna ಖಳನಾಯಕನೂ ನಾಯಕನೇ. ಅವನ ಜೀವನ ನಿಜವಾದ ನಾಯಕನಿಗಿಂತ ವಿಭಿನ್ನ ಹಾಗೂ ವಿಲಕ್ಷಣ. ವಿಲಕ್ಷಣವಾದರೂ ಆತನ ಬದುಕು ಆಸಕ್ತಿದಾಯಕವಾಗಿರುತ್ತದೆ. ರಾವಣನನ್ನು ಕುರಿತು ತಿಳಿದುಕೊಳ್ಳುವ ಆಸಕ್ತಿಯಿದ್ದರೂ ರಾಮಾಯಣವನ್ನು ಓದುವಾಗ ಮರ್ಯಾದಾಪುರುಷ ಶ್ರೀರಾಮನ ವ್ಯಕ್ತಿತ್ವ ಓದುಗನನ್ನು ಆವರಿಸಿಕೊಂಡುಬಿಡುತ್ತದೆ. ಲೇಖಕರಿಗೆ ಇದು ಸವಾಲಿನ ವಿಷಯ. ರಾಮಾಯಣವನ್ನು ರಾವಣನ ಕಥನವಾಗಿಸಿ ಮೂಲಕ್ಕೆ ಚ್ಯುತಿ ಬರದಂತೆ ಹೇಳುವುದು ಜಗದೀಶಶರ್ಮಾ ಸಂಪರಂತಹ ಪಂಡಿತರಿಗೆ ಮಾತ್ರ ಸಾಧ್ಯ. ಈ ಕೃತಿಯಲ್ಲಿ ಅವರ ಓದಿನ

Read More
Jogi Girish Rao Hatwar
Jogi Girish Rao Hatwar

Jagadisha Sharma Sampaರು ಸಾವಣ್ಣ ಪ್ರಕಾಶನಕ್ಕಾಗಿ ಬರೆದಿರುವ ಮಹಾಭಾರತ- ಹೇಳಿಯೂ ಹೇಳದ್ದು- ಕೃತಿಗೆ ಬರೆದಿರುವ ಮುನ್ನುಡಿ ಇದು: ವೈಯಕ್ತಿಕವಾಗಿ ನನಗೆ ಜಗದೀಶ ಶರ್ಮರೆಂದರೆ ಅಚ್ಚುಮೆಚ್ಚು. ಅವರ ಒಳನೋಟಗಳಿಗೆ ನಾನು ಮರುಳಾದವನು. ಒಂದು ಕತೆಯನ್ನು ಹೇಗೆ ಬಗೆಯಬೇಕು ಅನ್ನುವುದನ್ನು ಬಲ್ಲ ಶರ್ಮರು, ನಾವು ಸಾಮಾನ್ಯವಾಗಿ ಕತ್ತಲಲ್ಲಿಟ್ಟ ಕಥಾಭಾಗಗಳಿಗೂ ದೀಪ ಹಿಡಿಯುವ ಕೆಲಸ ಮಾಡುತ್ತಾರೆ. ನಾನೂ ಕೂಡ ಸದಸ್ಯನಾಗಿರುವ ಕಥೆಕೂಟ ಎಂಬ ವಾಟ್ಸಪ್ ಗ್ರೂಪಿನಲ್ಲಿ ಅವರು ಪ್ರತಿಸ್ಪಂದಿಸುವ ರೀತಿ, ಅವರ ವಾಗ್ವಾದದ ವೈಖರಿ, ಹೇಳಬೇಕಾದ್ದನ್ನು ನಿರ್ಭಿಡೆಯಿಂದ ಹೇಳುವ ಕ್ರಮ, ಹಾಗೆ

Read More