ನೀವು ಹೇಳಿದ್ದು
Gopalakrishna Kuntini
ಡಿಯರ್ Jagadisha Sharma Sampa ನಿಮ್ಮ’ಮಹಾಭಾರತ ಅನ್ವೇಷಣೆ’ ಓದಿದೆ. ಮಹಾಭಾರತ ಎಂದರೆ ಹಾಗೇ, ಪ್ರಶ್ನೆ ಮತ್ತು ಉತ್ತರ ಮತ್ತೆ ಪುನಃ ಪ್ರಶ್ನೆ ಮತ್ತು ನಿರುತ್ತರ. ನೀವು ಮಹಾಭಾರತದ ಕುರಿತ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದೀರಿ, ಸಂದೇಹಗಳನ್ನು ಮುನ್ನೆಲೆಗೆ ತಗೊಂಡು ಪರಿಹರಿಸಲು ಯತ್ನಿಸಿದ್ದೀರಿ. ಮಹಾಭಾರತ ಇಲ್ಲಿಗೇ ಮುಗಿಯುವುದಿಲ್ಲ. ಮುಗಿಯಲೇಬಾರದು ಎಂದೇ ಮಹಾಕಾವ್ಯವನ್ನು ವ್ಯಾಸರು ಬರೆದುಕೊಟ್ಟಿದ್ದಾರೆ. ಅದರ ಕುರಿತಾಗಿ ಪುನಃಪುನಃ ಸೃಷ್ಟಿಗಳು ನಡೆಯುತ್ತಿರುವುದನ್ನು ನೋಡಬೇಕೆಂದೇ ಅವರು ಚಿರಂಜೀವಿಯಾಗಿದ್ದಾರೆ. ಮಹಾಕಾವ್ಯಕ್ಕೇ ಸಾವಿಲ್ಲ, ಇನ್ನು ಕವಿಗೆ ಸಾವೇ? ಖಂಡಿತಾ ಇಲ್ಲ. ಧರ್ಮೇ ಚಾರ್ಥೇ ಚ ಕಾಮೇ
Read MoreYathiraj Veerambudhi
ಜಗದೀಶಶರ್ಮಾ ಸಂಪರ ಬರವಣಿಗೆಯ ಶಕ್ತಿ.! ಕೇವಲ 144 ಪುಟಗಳ ಪುಟ್ಟ ಪುಸ್ತಕದಲ್ಲಿ ಇಡೀ ಮಹಾಭಾರತದ ಸಾರವನ್ನು ಉಣಬಡಿಸಿದ್ದಾರೆ ಲೇಖಕ ಶ್ರೀ ಜಗದೀಶಶರ್ಮಾ ಸಂಪ. ಜೊತೆಗೆ ರಾಮಾಯಣದಿಂದ ಕೆಲವು ಘಟನೆಗಳು ಮತ್ತು ಪಾತ್ರಗಳನ್ನು ಹೋಲಿಕೆಗೆ ಇಲ್ಲಿ ತಂದಿದ್ದಾರೆ. ಇದು ಪ್ರಶ್ನೋತ್ತರದ ಪುಸ್ತಕ. ಆದರೂ ಅದು ಹೇಗೆ ಇಡಿಯ ಮಹಾಭಾರತ ಓದುಗರ ಮುಂದೆ ಸಂಪರು ಇಟ್ಟಿದ್ದಾರೆ ಎಂಬುದು ಸೋಜಿಗ. ಒಂದು ಅಧ್ಯಾಯದಲ್ಲಿ ಧೃತರಾಷ್ಟ್ರ ಕೊನೆಯಲ್ಲಿ ‘ನಾನು ಗೆಲುವಿನ ಆಸೆ ಬಿಟ್ಟೆ’ ಎಂದು ಪ್ರತಿಯೊಂದು ಸಲ ಹೇಳುವಾಗ ಇಡೀ ಮಹಾಭಾರತ ಕಣ್ಮುಂದೆ
Read MoreMahesha Araballi
2023/Oct/ಪುಸ್ತಕ-146 ಭಗವದ್ಗೀತೆ : ನಿಮಗೆ ಬೇಕಾದ್ದು ಭಗವದ್ಗೀತೆಯಲ್ಲಿದೆ – ಜಗದೀಶಶರ್ಮಾ ಸಂಪ Jagadisha Sharma Sampa ಬದುಕಿನ ಲೆಕ್ಕಗಳನ್ನು ಪರಿಹರಿಸಲು ನಮ್ಮ ಹತ್ತಿರ ಕ್ಯಾಲ್ಕ್ಯುಲೇಟರ್ ಇಲ್ಲ. ಸರಳ ಸಮೀಕರಣಗಳಿಗೆ ನಮ್ಮ ಅನುಭವದಿಂದ ಉತ್ತರ ಕಂಡುಹಿಡಿಯಬಹುದು. ಆದರೆ ಸಂಕೀರ್ಣ ಗಣಿತಕ್ಕೆ ಲಾಗರಿದಮ್ ಟೇಬಲ್ ಬೇಕು. ನಮ್ಮಲ್ಲಿರುವ ದ್ವಂದ್ವ, ಸಂದೇಹ, ಅನುಮಾನಗಳನ್ನು ಪರ್ಯಾಲೋಚಿಸಿ ಪರಿಹರಿಸಿಕೊಳ್ಳಲು ಜಗದೀಶಶರ್ಮಾ ಸಂಪ ಅವರ “ಭಗವದ್ಗೀತೆ – ನಿಮಗೆ ಬೇಕಾದ್ದು ಭಗವದ್ಗೀತೆಯಲ್ಲಿದೆ” ಕೃತಿ ಸಹಾಯಕವಾಗಿದೆ. ಜೀವನದ ಸಂಕೀರ್ಣ ಸಮೀಕರಣಕ್ಕೆ ಇದೊಂದು ಲಾಗರಿದಮ್ ಟೇಬಲ್. ಪಾಕೇಟ್ ಸೈಜಿನಲ್ಲಿರುವ
Read MoreYathiraj Veerambudhi
ರಾಮಾಯಣದ ಮೂಲಕ ವ್ಯಕ್ತಿತ್ವ ವಿಕಸನದ ಪಾಠ ಶ್ರೀ ಜಗದೀಶಶರ್ಮಾ ಸಂಪರ ಸ್ಫೂರ್ತಿ ರಾಮಾಯಣ-1 ಬಾಲಕಾಂಡ ಮತದಾನದ ದಿನ ಜನಪ್ರಿಯ ಲೇಖಕ ಶ್ರೀ ಜಗದೀಶಶರ್ಮಾ ಸಂಪ ಅವರೊಂದಿಗೆ ಮಾತನಾಡುತ್ತಿದ್ದೆ. ರಾಮಾಯಣದ ಕಥೆಯ ವೈಶಿಷ್ಟ್ಯದ ಬಗ್ಗೆ ನಮ್ಮ ಮಾತುಕತೆ ನಡೆದಿತ್ತು. ಎಲ್ಲ ವಯಸ್ಸಿನವರಿಗೂ ಏನಾದರೊಂದನ್ನು ಬಚ್ಚಿಟ್ಟುಕೊಂಡಿರುವ ಗ್ರಂಥ ವಾಲ್ಮೀಕಿ ಕೃತ ರಾಮಾಯಣ. ಒಬ್ಬ ವ್ಯಕ್ತಿ ಅವನ ಬಾಲ್ಯ, ಯೌವನ, ವೃದ್ಧಾಪ್ಯದ ಹಂತಗಳಲ್ಲಿ ಮತ್ತೆ ಮತ್ತೆ ರಾಮಾಯಣ ಓದಿದರೆ ಅವನಿಗೆ ಹೊಸ ಹೊಸ ಹೊಳಹುಗಳು ಕಾಣುತ್ತವೆ. ಎಲ್ಲ ಭಾಷೆಗಳಲ್ಲಿಯೂ ರಾಮಾಯಣ ಬಂದಿದೆ.
Read MoreYathiraj Veerambudhi
ದಶಕಂಠ ರಾವಣ ರಾಮಾಯಣದ ಅನೇಕ ರೂಪಾಂತರಗಳನ್ನು ಓದಿದ್ದರೂ ರಾವಣನ ಇಡೀ ಜೀವನದ ಚಿತ್ರ ದೊರಕಿರಲಿಲ್ಲ. ಶ್ರೀ ಜಗದೀಶಶರ್ಮ ಸಂಪರು ರಾವಣನ ಪಾಪಗಳು, ಅವನು ಪಡೆದ ಶಾಪಗಳು, ಅವನ ಪ್ರತಾಪಗಳು ಮತ್ತು ಕೊನೆಗೆ ಅವನ ಪರಿತಾಪಗಳನ್ನು ಅವರ ತಿಳಿಯಾದ ಸ್ಪಷ್ಟ ಶೈಲಿಯಲ್ಲಿ ಓದುಗರ ಮುಂದಿಟ್ಟಿದ್ದಾರೆ. ರಾವಣನ ದುರುಳತನವನ್ನು ವಿವರಿಸುತ್ತಾ, ಅಂತಹ ದುಷ್ಟತನ ಮಾಡುವವರ ಅಂತ್ಯದ ಬಗ್ಗೆ ಅಲ್ಲಲ್ಲಿ ಎಚ್ಚರಿಕೆ ನೀಡುತ್ತಾರೆ. ನಾನು ಬಹಳ ಖುಷಿಯಿಂದ ಓದಿದ ಪುಸ್ತಕ ಇದು. ಗೊತ್ತಿರುವ ಕಥೆ, ಗೊತ್ತಿರದಿದ್ದ ಹಲವು ವಿವರಗಳು. ಶರಣು ಜಗದೀಶ
Read Moreಡಾ.ಮಾರುತಿ ಎನ್ ಎನ್
ಹದಿನಾಲ್ಕು ವರ್ಷಗಳ ಶ್ರೀರಾಮನ ವನವಾಸವನ್ನು ನಾಲ್ಕೇ ಸಾಲುಗಳಲ್ಲಿ ಕಟ್ಟಿಕೊಟ್ಟ ವಿದ್ವಾಂಸರೆಂದರೆ ಜಗದೀಶ್ ಶರ್ಮಾ ಸಂಪರವರು. ಓದಿ ದಶಕಂಠ ರಾವಣ. Jagadisha Sharma Sampa
Read MoreYathiraj Veerambudhi
ಜಸ್ಟ್ 1 ಗಂಟೆ ಪುಸ್ತಕ ಮಾಲೆ Jagadisha Sharma Sampa ಶ್ರೀ ಜಗದೀಶಶರ್ಮಾ ಸಂಪ ಅವರನ್ನು ಭೇಟಿ ಆದರೆ ಅವರ ಮೃದು ಮಾತಿನ ಮೋಡಿಗೆ ಸಿಲುಕುವುದು ಖಾತ್ರಿ. ಅವರ ಯೂ ಟ್ಯೂಬ್ ಪ್ರವಚನಗಳು ಕೂಡ ಪ್ರೇರೇಪಕ. ಅವರ ಆರು ಜಸ್ಟ್ 1 ಗಂಟೆ ಪುಸ್ತಕಗಳು ನೆನ್ನೆ ಪ್ರಕಾಶಕ ಶ್ರೀ ಜಮೀಲ್ ನನ್ನನ್ನು ವೇದಿಕೆಗೆ ಕರೆಸಿ ಜನಪ್ರಿಯ ನಟ ಶ್ರೀ ರಮೇಶ್ ಅರವಿಂದ್ ಅವರಿಂದ ಕೊಡಿಸಿದರು. ನೆನ್ನೆ ಅವುಗಳಲ್ಲಿ ಒಂದು ಪುಸ್ತಕ ಓದಿದೆ… ಊಹೂಂ ಓದಿಸಿಕೊಂಡು ಹೋಯಿತು..! ಆತ್ಮಗುಣ
Read MoreMahesha Araballi
2023/Oct/ಪುಸ್ತಕ-150 ಕಲಿಸದೇ ಕಲಿಸುವ 24 ಗುರುಗಳು – ಜಗದೀಶಶರ್ಮಾ ಸಂಪ Jagadisha Sharma Sampa ಜಗದೀಶಶರ್ಮಾ ಸಂಪ ಅವರ “ಜಸ್ಟ್ 1 ಗಂಟೆ” ಸರಣಿಯ ಪುಸ್ತಕ “ಕಲಿಸದೇ ಕಲಿಸುವ 24 ಗುರುಗಳು” ನಿಜಕ್ಕೂ ಕೆಲವು ವಿಚಾರಗಳನ್ನು ಮೆಲುಕು ಹಾಕುವಂತೆ ಮಾಡುತ್ತದೆ. ಅವಧೂತರು ಪ್ರಕೃತಿಯನ್ನು ಗಮನಿಸುತ್ತಾ ಕಲಿತ ೨೪ ಕಲಿಕೆಗಳ ಸಾರ ಈ ಕೃತಿಯಲ್ಲಿದೆ. ಆ ೨೪ ಕಲಿಕೆಯ ಪ್ರೇರಣೆಗಳು ಹೀಗಿವೆ – ಭೂಮಿ, ವಾಯು, ಆಕಾಶ, ನೀರು, ಅಗ್ನಿ, ಚಂದ್ರ, ಸೂರ್ಯ, ಪಾರಿವಾಳ, ಹೆಬ್ಬಾವು, ಸಮುದ್ರ, ಪತಂಗ,
Read MoreSuvarnini Konale
ಕೃತಿ: ‘ಜಸ್ಟ್ ೧ ಗಂಟೆ’ ಸರಣಿಯ #ಕಲಿಸದೇ_ಕಲಿಸುವ_೨೪_ಗುರುಗಳು ಲೇಖಕರು: ಜಗದೀಶಶರ್ಮಾ ಸಂಪ Jagadisha Sharma Sampa ಪ್ರಕಾಶಕರು: ಸಾವಣ್ಣ ಪ್ರಕಾಶನ Jameel Sawanna ಅವಧೂತರು ನಡೆಯುತ್ತಾರೆ. ಆದರೆ ಸುಮ್ಮನೇ ನಡೆಯುವುದಿಲ್ಲ. ತಮ್ಮ ಕಣ್ಣು ಕಿವಿಗಳನ್ನು ತೆರೆದು ಸುತ್ತಲಿನಿಂದ ಸಿಗಬಹುದಾದ ವಿಚಾರಗಳನ್ನು ಸ್ವೀಕರಿಸುತ್ತಾರೆ. ದಾರಿಯಲ್ಲಿ ಕಾಣುವ ಜೇಡ, ಜಿಂಕೆ, ಆನೆ, ಜೇನುಹುಳ, ಬಿಲ್ಲುಗಾರ, ವೇಶ್ಯೆ, ಸೂರ್ಯ, ಸಮುದ್ರ… ಎಲ್ಲರೂ ಅವರಿಗೆ ಪಾಠ ಕಲಿಸುತ್ತಾರೆ. ಅಥವಾ ಅವಧೂತರೇ ಅವರೊಳಗಿನ ಪಾಠವನ್ನು ಅರಿತುಕೊಳ್ಳುತ್ತಾರೆ. ಈ ಪಾಠಗಳು ಲೌಕಿಕ ಬದುಕಿಗೂ ಮುಖ್ಯ, ಅಧ್ಯಾತ್ಮ
Read MoreYathiraj Veerambudhi
ಜಸ್ಟ್ 1 ಗಂಟೆ ಹೊತ್ತಗೆಗಳು ಭಗವದ್ಗೀತೆ ನಿಮಗೆ ಬೇಕಾದ್ದು ಭಗವದ್ಗೀತೆಯಲ್ಲಿದೆ ಸಾವಣ್ಣ ಪ್ರಕಾಶನದ ಶ್ರೀ ಜಮೀಲ್ ಸಾವಣ್ಣ ನನಗೆ ಗೀತೆಯ ಬಗ್ಗೆ ಪುಸ್ತಕ ಬರೆಯಿರೆಂದಾಗ ಬೆಚ್ಚಿದ್ದೆ. ನನ್ನ ‘ಗೀತೆ ಬಚ್ಚಿಟ್ಟಿದ್ದ ಬದುಕಿನ ಪಾಠಗಳು’ ಮನುಷ್ಯರ ಗುಣ ವರ್ತನೆಗಳ ಬಗ್ಗೆ ಇದೆ. ನಂತರ ‘ಬದುಕು ಭಾರ ಗೀತಾ ಪರಿಹಾರ’ ಪುಸ್ತಕದಲ್ಲಿ ಬದುಕಿನ ಸಮಸ್ಯೆಗಳಿಗೆ ಗೀತೆಯಲ್ಲಿ ಪರಿಹಾರ ಹುಡುಕುವ ಪ್ರಯತ್ನ ಮಾಡಿದ್ದೇನೆ. Sri Jagadisha Sharma Sampa ಶ್ರೀ ಜಗದೀಶಶರ್ಮಾ ಸಂಪರು ಈ ಪುಟ್ಟ ಪುಸ್ತಕದಲ್ಲಿ ಇಡೀ 700 ಶ್ಲೋಕಗಳ
Read MoreVijayalakshmi
‘ಮಹಾಭಾರತ ಹೇಳಿಯೂ ಹೇಳದ್ದು’ ಪುಸ್ತಕ ಖರೀದಿಸಿದ ಗ್ರಾಹಕರ ಅನಿಸಿಕೆ #Sripustakam #jagadishasharmasampa #MahabharataHeliyuHeladdu #kannadabooks
Read MoreYathiraj Veerambudhi
ಜಸ್ಟ್ 1 ಗಂಟೆ ಹೊತ್ತಗೆಗಳು ಧರ್ಮ ಒಳಹೊರಗಿನ ಬೆಳಕಿಗೆ; ಬವಣೆಯಿಲ್ಲದ ಬದುಕಿಗೆ Sri Jagadisha Sharma Sampa ಈ ಹೊತ್ತಗೆಗೆ ಶ್ರೀ ಜಗದೀಶಶರ್ಮಾ ಸಂಪ ಅವರಿಗೆ ನಮನಗಳು. ಧರ್ಮ ಎನ್ನುವ ಶಬ್ದದ ಅರ್ಥ ಅಗಾಧ. ಆಂಗ್ಲದಲ್ಲಿ ಸರಳವಾಗಿ ರಿಲಿಜನ್ ಎಂದುಬಿಡುವರೇನೋ… ಧರ್ಮದ ದಶಮುಖಗಳನ್ನು ಓದುಗರ ಮುಂದೆ ಅನಾವರಣ ಮಾಡಿದ್ದಾರೆ ಶ್ರೀ ಸಂಪ. ಏನು ಮಾಡಬೇಕು, ಏನು ಮಾಡಕೂಡದು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ ಲೇಖಕರು. ಇದರಲ್ಲಿರುವ ಬಹ್ವಂಶ ಕಥೆಗಳನ್ನು ಓದುತ್ತಿದ್ದಂತೆ, ‘ಅರೆರೆ! ಈ ಕಥೆ ನಮಗೆ ಚಿಕ್ಕಂದಿನಲ್ಲಿ ನೀತಿಪಾಠದ
Read More