ಡಾ.ಮಾರುತಿ ಎನ್ ಎನ್
ಡಾ.ಮಾರುತಿ ಎನ್ ಎನ್

ಹದಿನಾಲ್ಕು ವರ್ಷಗಳ ಶ್ರೀರಾಮನ ವನವಾಸವನ್ನು ನಾಲ್ಕೇ ಸಾಲುಗಳಲ್ಲಿ ಕಟ್ಟಿಕೊಟ್ಟ ವಿದ್ವಾಂಸರೆಂದರೆ ಜಗದೀಶ್ ಶರ್ಮಾ ಸಂಪರವರು. ಓದಿ ದಶಕಂಠ ರಾವಣ. Jagadisha Sharma Sampa

Read More
Yathiraj Veerambudhi
Yathiraj Veerambudhi

ಜಸ್ಟ್ 1 ಗಂಟೆ ಪುಸ್ತಕ ಮಾಲೆ Jagadisha Sharma Sampa ಶ್ರೀ ಜಗದೀಶಶರ್ಮಾ ಸಂಪ ಅವರನ್ನು ಭೇಟಿ ಆದರೆ ಅವರ ಮೃದು ಮಾತಿನ ಮೋಡಿಗೆ ಸಿಲುಕುವುದು ಖಾತ್ರಿ. ಅವರ ಯೂ ಟ್ಯೂಬ್ ಪ್ರವಚನಗಳು ಕೂಡ ಪ್ರೇರೇಪಕ. ಅವರ ಆರು ಜಸ್ಟ್ 1 ಗಂಟೆ ಪುಸ್ತಕಗಳು ನೆನ್ನೆ ಪ್ರಕಾಶಕ ಶ್ರೀ ಜಮೀಲ್ ನನ್ನನ್ನು ವೇದಿಕೆಗೆ ಕರೆಸಿ ಜನಪ್ರಿಯ ನಟ ಶ್ರೀ ರಮೇಶ್ ಅರವಿಂದ್ ಅವರಿಂದ ಕೊಡಿಸಿದರು. ನೆನ್ನೆ ಅವುಗಳಲ್ಲಿ ಒಂದು ಪುಸ್ತಕ ಓದಿದೆ… ಊಹೂಂ ಓದಿಸಿಕೊಂಡು ಹೋಯಿತು..! ಆತ್ಮಗುಣ

Read More
Mahesha Araballi
Mahesha Araballi

2023/Oct/ಪುಸ್ತಕ-150 ಕಲಿಸದೇ ಕಲಿಸುವ 24 ಗುರುಗಳು – ಜಗದೀಶಶರ್ಮಾ ಸಂಪ Jagadisha Sharma Sampa ಜಗದೀಶಶರ್ಮಾ ಸಂಪ ಅವರ “ಜಸ್ಟ್ 1 ಗಂಟೆ” ಸರಣಿಯ ಪುಸ್ತಕ “ಕಲಿಸದೇ ಕಲಿಸುವ 24 ಗುರುಗಳು” ನಿಜಕ್ಕೂ ಕೆಲವು ವಿಚಾರಗಳನ್ನು ಮೆಲುಕು ಹಾಕುವಂತೆ ಮಾಡುತ್ತದೆ. ಅವಧೂತರು ಪ್ರಕೃತಿಯನ್ನು ಗಮನಿಸುತ್ತಾ ಕಲಿತ ೨೪ ಕಲಿಕೆಗಳ ಸಾರ ಈ ಕೃತಿಯಲ್ಲಿದೆ. ಆ ೨೪ ಕಲಿಕೆಯ ಪ್ರೇರಣೆಗಳು ಹೀಗಿವೆ – ಭೂಮಿ, ವಾಯು, ಆಕಾಶ, ನೀರು, ಅಗ್ನಿ, ಚಂದ್ರ, ಸೂರ್ಯ, ಪಾರಿವಾಳ, ಹೆಬ್ಬಾವು, ಸಮುದ್ರ, ಪತಂಗ,

Read More
Suvarnini Konale
Suvarnini Konale

ಕೃತಿ: ‘ಜಸ್ಟ್ ೧ ಗಂಟೆ’ ಸರಣಿಯ #ಕಲಿಸದೇ_ಕಲಿಸುವ_೨೪_ಗುರುಗಳು ಲೇಖಕರು: ಜಗದೀಶಶರ್ಮಾ ಸಂಪ Jagadisha Sharma Sampa ಪ್ರಕಾಶಕರು: ಸಾವಣ್ಣ ಪ್ರಕಾಶನ Jameel Sawanna ಅವಧೂತರು ನಡೆಯುತ್ತಾರೆ. ಆದರೆ ಸುಮ್ಮನೇ ನಡೆಯುವುದಿಲ್ಲ. ತಮ್ಮ ಕಣ್ಣು ಕಿವಿಗಳನ್ನು ತೆರೆದು ಸುತ್ತಲಿನಿಂದ ಸಿಗಬಹುದಾದ ವಿಚಾರಗಳನ್ನು ಸ್ವೀಕರಿಸುತ್ತಾರೆ. ದಾರಿಯಲ್ಲಿ ಕಾಣುವ ಜೇಡ, ಜಿಂಕೆ, ಆನೆ, ಜೇನುಹುಳ, ಬಿಲ್ಲುಗಾರ, ವೇಶ್ಯೆ, ಸೂರ್ಯ, ಸಮುದ್ರ… ಎಲ್ಲರೂ ಅವರಿಗೆ ಪಾಠ ಕಲಿಸುತ್ತಾರೆ. ಅಥವಾ ಅವಧೂತರೇ ಅವರೊಳಗಿನ ಪಾಠವನ್ನು ಅರಿತುಕೊಳ್ಳುತ್ತಾರೆ. ಈ ಪಾಠಗಳು ಲೌಕಿಕ ಬದುಕಿಗೂ ಮುಖ್ಯ, ಅಧ್ಯಾತ್ಮ

Read More
Yathiraj Veerambudhi
Yathiraj Veerambudhi

ಜಸ್ಟ್ 1 ಗಂಟೆ ಹೊತ್ತಗೆಗಳು ಭಗವದ್ಗೀತೆ ನಿಮಗೆ ಬೇಕಾದ್ದು ಭಗವದ್ಗೀತೆಯಲ್ಲಿದೆ ಸಾವಣ್ಣ ಪ್ರಕಾಶನದ ಶ್ರೀ ಜಮೀಲ್ ಸಾವಣ್ಣ ನನಗೆ ಗೀತೆಯ ಬಗ್ಗೆ ಪುಸ್ತಕ ಬರೆಯಿರೆಂದಾಗ ಬೆಚ್ಚಿದ್ದೆ. ನನ್ನ ‘ಗೀತೆ ಬಚ್ಚಿಟ್ಟಿದ್ದ ಬದುಕಿನ ಪಾಠಗಳು’ ಮನುಷ್ಯರ ಗುಣ ವರ್ತನೆಗಳ ಬಗ್ಗೆ ಇದೆ. ನಂತರ ‘ಬದುಕು ಭಾರ ಗೀತಾ ಪರಿಹಾರ’ ಪುಸ್ತಕದಲ್ಲಿ ಬದುಕಿನ ಸಮಸ್ಯೆಗಳಿಗೆ ಗೀತೆಯಲ್ಲಿ ಪರಿಹಾರ ಹುಡುಕುವ ಪ್ರಯತ್ನ ಮಾಡಿದ್ದೇನೆ. Sri Jagadisha Sharma Sampa ಶ್ರೀ ಜಗದೀಶಶರ್ಮಾ ಸಂಪರು ಈ ಪುಟ್ಟ ಪುಸ್ತಕದಲ್ಲಿ ಇಡೀ 700 ಶ್ಲೋಕಗಳ

Read More
Vijayalakshmi
Vijayalakshmi

‘ಮಹಾಭಾರತ ಹೇಳಿಯೂ ಹೇಳದ್ದು’ ಪುಸ್ತಕ ಖರೀದಿಸಿದ ಗ್ರಾಹಕರ ಅನಿಸಿಕೆ #Sripustakam #jagadishasharmasampa #MahabharataHeliyuHeladdu #kannadabooks

Read More
Yathiraj Veerambudhi
Yathiraj Veerambudhi

ಜಸ್ಟ್ 1 ಗಂಟೆ ಹೊತ್ತಗೆಗಳು ಧರ್ಮ ಒಳಹೊರಗಿನ ಬೆಳಕಿಗೆ; ಬವಣೆಯಿಲ್ಲದ ಬದುಕಿಗೆ Sri Jagadisha Sharma Sampa ಈ ಹೊತ್ತಗೆಗೆ ಶ್ರೀ ಜಗದೀಶಶರ್ಮಾ ಸಂಪ ಅವರಿಗೆ ನಮನಗಳು. ಧರ್ಮ ಎನ್ನುವ ಶಬ್ದದ ಅರ್ಥ ಅಗಾಧ. ಆಂಗ್ಲದಲ್ಲಿ ಸರಳವಾಗಿ ರಿಲಿಜನ್ ಎಂದುಬಿಡುವರೇನೋ… ಧರ್ಮದ ದಶಮುಖಗಳನ್ನು ಓದುಗರ ಮುಂದೆ ಅನಾವರಣ ಮಾಡಿದ್ದಾರೆ ಶ್ರೀ ಸಂಪ. ಏನು ಮಾಡಬೇಕು, ಏನು ಮಾಡಕೂಡದು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ ಲೇಖಕರು. ಇದರಲ್ಲಿರುವ ಬಹ್ವಂಶ ಕಥೆಗಳನ್ನು ಓದುತ್ತಿದ್ದಂತೆ, ‘ಅರೆರೆ! ಈ ಕಥೆ ನಮಗೆ ಚಿಕ್ಕಂದಿನಲ್ಲಿ ನೀತಿಪಾಠದ

Read More
Mahesha Araballi
Mahesha Araballi

2023/Dec/ಪುಸ್ತಕ-169 ಯಕ್ಷಪ್ರಶ್ನೆ – ಜಗದೀಶಶರ್ಮಾ ಸಂಪ Jagadisha Sharma Sampa ಡಿವೈನ್ ಡಾನ್ ಎಂದೇ ಪ್ರಸಿದ್ಧರಾದ ಜಗದೀಶಶರ್ಮಾ ಸಂಪರವರ “ಜಸ್ಟ್ 1 ಗಂಟೆಯ” ಸೀರೀಸಿನ ಕೃತಿ “ಯಕ್ಷಪ್ರಶ್ನೆ” ಆಸಕ್ತಿಕರವಾಗಿದೆ. ಜೀವಿಯನ್ನು ಮೇಲೆತ್ತುವುದು ಯಾವುದು? ಯಾವುದರಿಂದ ಬುದ್ಧಿವಂತನಾಗುವುದು? ಆಕಾಶಕ್ಕಿಂತ ಎತ್ತರ ಯಾವುದು? ನಿದ್ರೆಯಲ್ಲೂ ಎಚ್ಚರಿರುವುದು ಯಾರು? ಏನನ್ನು ಬಿಟ್ಟರೆ ಸುಖಿಯಾಗಬಹುದು? ಈ ಬಗೆಯ 64 ಪ್ರಶ್ನೆಗಳಿಗೆ ಧರ್ಮರಾಯ ಉತ್ತರಿಸಿದ ಸಂದರ್ಭ, ಪೂರಕವಾದ ಉಪಕಥೆಗಳು ಹಾಗೂ ಝೆನ್ ಕಥೆಗಳು ಈ ಕೃತಿಯಲ್ಲಿವೆ.

Read More
Shridhar Saraf
Shridhar Saraf

ಸದ್ಗುಣ ಮತ್ತು ಸಾಮರ್ಥ್ಯಗಳು ಹೂವಿನ ಪರಿಮಳದಂತೆ. ಅವು ಇದ್ದರೆ ಸಾಕು,ಜನಕ್ಕೆ ತಾನಾಗಿ ತಿಳಿಯುತ್ತದೆ. ಈ ಪುಸ್ತಕದಲ್ಲಿಯ ಹೀಗೊಂದು ವಾಕ್ಯ ಶ್ರೀ Jagadisha Sharma ರ ಸದ್ಗುಣ ಮತ್ತು ಸಾಮರ್ಥ್ಯವನ್ನ ತಾನಾಗಿಯೇ ತಿಳಿಯುವಂತೆ ಮಾಡಿದ ಅನುಭವ ನನಗಾಯ್ತು. ಸಧ್ಯ ಓದುತ್ತಿರುವೆ.

Read More
Ravi Kantha
Ravi Kantha

ಮಹಾಭಾರತದ ನೈಜ‌ ನಾಯಕ ಎನ್ನಲಾದ ವಿದುರ ಅಲ್ಲಿ ಯಾರ ವಿರುದ್ದವೂ ತೊಡೆ ತಟ್ಟಲಿಲ್ಲ, ಅಸ್ತ್ರ ಹೂಡಲಿಲ್ಲ, ಶಸ್ತ್ರ ಹಿಡಿದು ಹೋರಾಡಲಿಲ್ಲ. ಆದರೆ ಮಹಾಭಾರತದುದ್ದಕ್ಕೂ ಆತ ನ್ಯಾಯ-ನೀತಿ ಪರವಾಗಿಯೇ ಇದ್ದ. ಅಷ್ಟೇ ಆಗಿದ್ದಿದ್ದರೆ ಆತ ಪ್ರಸ್ತುತ ಅನಿಸಿರುತ್ತಿರಲಿಲ್ಲವೇನೋ? ಆದರೆ ಆತ ಅಗತ್ಯ ಬಿದ್ದಾಗೆಲ್ಲ ಮಾತಾಡಿದ, ಏನು ಹೇಳಬೇಕಿತ್ತೋ ಅದನ್ನು ಹೇಳಿದ. ಹೇಳಬೇಕಾದ್ದನ್ನು ಹೇಳದೆ ಸುಮ್ಮನಿರಲಿಲ್ಲ. ಆತ ಹೇಳಿದ್ದನ್ನು ಮೊದಮೊದಲು ಒಪ್ಪದವರು ಕೊನೆಯಲ್ಲಾದರೂ ಒಪ್ಪಿದರು. ಕೊನೆಯವರೆಗೂ ಒಪ್ಪದವರು ಅನ್ಯಾಯವಾಗಿ ಸಾವನ್ನಪ್ಪಿದರು. ವಿದುರ ಎರಡೂ ಕಡೆಗೂ ಇದ್ದ, ಕೌರವ-ಪಾಂಡವರಿಬ್ಬರ ಜೊತೆಗೂ ಇದ್ದು

Read More
Naveena Krishna Bhat
Naveena Krishna Bhat

ವಿದುರ – ಜಗದೀಶಶರ್ಮಾ ಸಂಪ ವ್ಯಾಸಋಷಿಪ್ರಣೀತ ಮಹಾಭಾರತದಲ್ಲಿ ಕಂಡುಬರುವ ವಿದುರನ ಪಾತ್ರ ಬಹು ವಿಶಿಷ್ಠವಾದದ್ದು. ಮಹಾಭಾರತ ಕಾಲದ ರಾಜನೀತಿಜ್ಞರಲ್ಲಿ ವಿದುರನನ್ನು ಮೀರಿಸಿದ ಮತ್ತೊಬ್ಬನಿರಲಿಲ್ಲ. ಹಾಗಾಗಿಯೇ ಆತ ಕುರುಕುಲದ ಆಸ್ಥಾನದಲ್ಲಿದ್ದ ಮಹಾ ಮೇಧಾವಿ ಹಾಗೂ ಅಪ್ರತಿಮ ಬುದ್ಧಿಶಾಲಿ. ಮಾಂಡವ್ಯ ಮುನಿಯಿಂದ ಶಾಪಗ್ರಸ್ತನಾದ ಮೃತ್ಯು ದೇವತೆ ಯಮನೇ ವಸುಂಧರೆಯಲ್ಲಿ ವಿದುರನಾಗಿ ಜನಿಸಿ ಕುರುಕುಲದ ಆಧಾರಸ್ತಂಭವಾಗುತ್ತಾನೆ. ಹಲವು ಸಂದರ್ಭಗಳಲ್ಲಿ ವಿದುರನ ವಿವೇಕ ತಣ್ಣೀರನ್ನೂ ತಣಿಸುತ್ತಿತ್ತು! ಇಂತಿಪ್ಪ ವಿದುರನ ಪಾತ್ರ ಚಿತ್ರಣವನ್ನು ಕಟ್ಟಿಕೊಡುವ ಹೊತ್ತಗೆಯೇ ಜಗದೀಶಶರ್ಮಾ ಸಂಪ ಅವರ ‘ವಿದುರ’. ಇಲ್ಲಿರುವುದು ನಾವೆಲ್ಲರೂ

Read More
Mahesha Araballi
Mahesha Araballi

2023/Dec/ಪುಸ್ತಕ-176 ಚಾಣಕ್ಯ ಹೇಳೋದನ್ನ ಕೇಳಿ – ಜಗದೀಶಶರ್ಮಾ ಸಂಪ Jagadisha Sharma Sampa ಚಾಣಕ್ಯ ನೀತಿಯನ್ನು ಸಂಕ್ಷಿಪ್ತವಾಗಿ, ಸರಳವಾಗಿ ಈ ಕೃತಿಯಲ್ಲಿ ವಿವರಿಸಲಾಗಿದೆ. ಕೈಪಿಡಿ ಮಾದರಿಯ ಈ ಪುಸ್ತಕವನ್ನು ಆಗಾಗ ಮೆಲುಕು ಹಾಕುತ್ತಿರಬಹುದು. ಕೆಲವು ವಿವರಗಳು ಹೀಗಿವೆ: – ಬಾಲಿಶರು ಕೆಲಸ ಕೆಟ್ಟರೆ ದೋಷಾರೋಪ ಮಾಡುತ್ತಾರೆ – ಅತಿ ಆಸೆ ಬುದ್ಧಿಯನ್ನು ಮುಚ್ಚುತ್ತದೆ – ಹೆದರುವವಗೆ ಕಾರ್ಯದ ಯೋಚನೆ ವ್ಯರ್ಥ – ಕೃತಜ್ಞನಲ್ಲದವನಿಗೆ ನರಕದಿಂದ ಬಿಡುಗಡೆಯಿಲ್ಲ – ಸುಖಕ್ಕೆ ಧರ್ಮವು ಮೂಲ – ಅರ್ಥಕ್ಕೆ ದೇಶವು ಮೂಲ

Read More