ಚಾಣಕ್ಯ | Chanakya
ಚಾಣಕ್ಯನೆಂದರೆ ಭವ್ಯ ಇತಿಹಾಸ, ವರ್ತಮಾನ, ಭವಿಷ್ಯ ಕೂಡ. ಆತನ ಅರ್ಥಶಾಸ್ತ್ರ ಮತ್ತು ನೀತಿಶಾಸ್ತ್ರಗಳು ರಾಜ್ಯಾಡಳಿತಕ್ಕೆ ಮಾತ್ರವಲ್ಲ ಸಾಮಾನ್ಯ ಮಾನವನಿಗೂ ಬೇಕಾಗುವಂಥವು.
‘ಚಾಣಕ್ಯ’ ಪುಸ್ತಕ ಆತ ರಚಿಸಿದ ನೀತಿಶಾಸ್ತ್ರವನ್ನು ಎಳೆ ಎಳೆಯಾಗಿ ಬಿಡಿಸಿದೆ.
ಸುಖವು ಎಲ್ಲರಿಗೂ ಬೇಕು. ಆದರೆ ಸುಖದ ಮೂಲ ಯಾವುದು ಎಂದರೆ ಧರ್ಮ ಎಂದು ಆರಂಭಿಸುತ್ತ ಚಾಣಕ್ಯ ಒಂದೊಂದೆ ಸೋಪಾನವನ್ನು ಏರಿಸುತ್ತಾನೆ.
ಸುಖಕ್ಕೆ ಧರ್ಮವು ಮೂಲ.
ಧರ್ಮಕ್ಕೆ ಅರ್ಥವು ಮೂಲ.
ಅರ್ಥಕ್ಕೆ ದೇಶವು ಮೂಲ.
ರಾಜ್ಯಕ್ಕೆ ಇಂದ್ರಿಯಗಳ ಸಂಯಮ ಮೂಲ.
ಇಂದ್ರಿಯಸಂಯಮಗಳ ಮೂಲ ವಿನಯ.
ವಿನಯದ ಮೂಲ ಅನುಭವಿಗಳ ಸೇವೆ.
ಹೀಗೆ ಅಲ್ಪಾಕ್ಷರದ ನೀತಿಸೂತ್ರಗಳಿಗೆ ಸರಳವೂ ಸಂಕ್ಷೇಪವೂ ಆದ ವಿವರಣೆ ಈ ಪುಸ್ತಕ.
ಜಸ್ಟ್ ಒನ್ ಅವರ್ ಓದಿ – ಇದು ಬೆಸ್ಟ್ ಒನ್ ಅವರ್ ಆಗುವುದು.
- ಲೋಹಿತ ಹೆಬ್ಬಾರ್