ಧರ್ಮ | Dharma
ಧರ್ಮ ಎಂದರೇನು ಎಂದು ಯಾರನ್ನಾದರೂ ಕೇಳಿದರೆ ಒಬ್ಬೊಬ್ಬರದು ಒಂದೊಂದು ಉತ್ತರ ಬಂದೀತು. ಯಾವುದು ಧರ್ಮ ಎಂದು ಗೊತ್ತಾಗದೇ ಗೊಂದಲ ಹಾಗೆಯೇ ಉಳಿದೀತು.
ಆದರೆ, ‘ಧರ್ಮ’ ಪುಸ್ತಕವು ಧರ್ಮದ ಬಗ್ಗೆ ಸ್ಪಷ್ಟ ಕಲ್ಪನೆಯನ್ನು ನೀಡುತ್ತದೆ.
ಪುಸ್ತವನ್ನು ಹಿಡಿದು ಧರ್ಮವೆಂದರೇನು ಎಂದು ಕೇಳಿದರೆ, ಅದು ಹೀಗೆ ಹೇಳುತ್ತದೆ:
ಧರ್ಮ ಎಂದರೆ? -ಕಲಿಯುವುದು.
ಧರ್ಮ ಎಂದರೆ? -ಸತ್ಯವಾಡುವುದು.
ಧರ್ಮ ಎಂದರೆ? -ಕದಿಯದಿರುವುದು.
ಧರ್ಮ ಎಂದರೆ? -ವಿವೇಕಿಯಾಗಿರುವುದು.
ಧರ್ಮ ಎಂದರೆ? -ದ್ವೇಷ ಮಾಡದಿರುವುದು.
ಧರ್ಮ ಎಂದರೆ? -ಎಲ್ಲರನ್ನೂ ಎಲ್ಲವನ್ನೂ ಸಹಿಸುವುದು.
ಧರ್ಮ ಎಂದರೆ? -ಒಳಗೂ ಹೊರಗೂ ಶುದ್ಧವಾಗಿರುವುದು.
ಧರ್ಮ ಎಂದರೆ? -ನನ್ನನ್ನು ನಾವೇ ನಿಯಂತ್ರಿಸಿಕೊಳ್ಳುವುದು.
ಧರ್ಮ ಎಂದರೆ? -ಇಂದ್ರಿಯಗಳು ನಮ್ಮ ಅಧೀನದಲ್ಲಿ ಇರುವುದು.
ಧರ್ಮ ಎಂದರೆ? -ಯಾವ ಸಂದರ್ಭದಲ್ಲೂ ಧೈರ್ಯ ಕಳೆದುಕೊಳ್ಳದಿರುವುದು.
ಜಗತ್ತಿನಲ್ಲಿರುವ ಹತ್ತು ಧರ್ಮಗಳಿವು.
ಇಷ್ಟೆಲ್ಲ ದೊಡ್ದದಾ ಧರ್ಮ ಎಂದರೆ. ಹೌದು. ಆದರೆ ‘ಧರ್ಮ’ ಪುಸ್ತಕ ಅಷ್ಟು ದೊಡ್ಡದಲ್ಲ. ಈ ಪುಸ್ತಕದಿಂದ ಕೇವಲ ಗಂಟೆಯಲ್ಲಿ ಇಷ್ಟು ದೊಡ್ಡ ಧರ್ಮದ ವಿಚಾರವನ್ನು ತಿಳಿಯಬಹುದು. ತಮ್ಮದಾಗಿಸಿಕೊಳ್ಳಬಹುದು.
ಜಸ್ಟ್ ಒನ್ ಅವರ್ – ಸಿಗಲಿದೆ ಧರ್ಮದ ಪವರ್.
-
- ಲೋಹಿತ ಹೆಬ್ಬಾರ್