ದಿವ್ಯಜೀವನ | Divyajīvana
ಮಾನವ ಜನ್ಮ ದುರ್ಲಭವಾದುದು. ಪೂರ್ವಾರ್ಜಿತ ಪುಣ್ಯ ಸಂಚಯದಿಂದ ಮಾತ್ರ ಮಾನವ ಜನ್ಮ ಲಭಿಸುವುದು. ಆದುದರಿಂದ ಮಾನವನು ತನ್ನ ಕರ್ತವ್ಯಗಳನ್ನು ಸಮರ್ಥರೀತಿಯಲ್ಲಿ ಪಾಲಿಸಬೇಕು. ಸಮರ್ಪಣಾ ಭಾವನೆಯಿಂದ ನಿರ್ವಹಿಸಬೇಕು. ದೇಹವಿರುವವರೆಗೂ ಕರ್ತವ್ಯದ ಹೊಣೆ ಇದ್ದೇ ಇರುವುದು. ಇoತಹ ಹತ್ತು ಹಲವು ಸoದೇಶಗಳ ಜೊತೆಗೆ ಆದಿಶಂಕರರ ಅವಿಚ್ಛಿನ್ನ ಪರಂಪರೆಯಾದ ಶ್ರೀರಾಮಚಂದ್ರಾಪುರಮಠದ 35 ಪೀಠಾಧಿಪತಿಗಳಾಗಿದ್ದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಂದ್ರಭಾರತೀ ಸ್ವಾಮಿಗಳ ಜೀವನದ ಕಿರುಚಿತ್ರಣ ನೀಡುವ ಅಮೂಲ್ಯ ಕೃತಿಯೇ ದಿವ್ಯ ಜೀವನ