ಗೋಸಾಮ್ರಾಜ್ಯದ ಅನಭಿಷಿಕ್ತ ಸಮ್ರಾಟ ಮಹಾನಂದಿ | Gōsāmrājyada Anabhiṣikta Samrāṭa Mahānandi
ಸಂತಮಹಾನಂದಿಯ ಭೂಮವ್ಯಕ್ತಿತ್ವವನ್ನು ಕಿರಿದಾಗಿ ಹಿಡಿದಿಡುವ ಸಾಹಸವಿದು ಅಲ್ಲಿಗೆ ಸಲ್ಲುವ, ಆದರೆ ಇಲ್ಲಿನವರಿಗಾಗಿ ಇಲ್ಲಿಗೂ, ಕಾಲದ ಮಹಾಭಿಯಾನದ ಕೆಲಸಮಯ ಸಂದ ಚೇತನವದು. ಸಾಮಾನ್ಯ ಕಣ್ಣಿಗೂ ಅಸಾಮಾನ್ಯತೆಯ ಅನುಭವವಾಗದಿದ್ದರೂ ಅರಿವಾಗಿಸಿದ ವ್ಯಕ್ತಿತ್ವವದು. ಪ್ರೇರಣೆಯೊಂದರ ಮೂಲಕ, ಸನ್ನಿಧಿಯ ಇರುವಿಕೆಯ ಮೂಲಕ ಮಹತ್ಕಾರ್ಯವೊಂದನ್ನು ಆಗಮಾಡಿದ ಅನುಪಮತೆಯದು.