ಹೂಬಾಣ | Hoobana
ಕೃತಿ ರಚನೆ ಒಂದು ಅಸಾಧಾರಣ ಸಾಧನೆ. ಅದು ಸುಲಭಸಾಧ್ಯವಲ್ಲ. ಅದರಲ್ಲೂ ಕೃತಿಯೊಂದನ್ನು ರಸಮಯವಾಗಿ ರೂಪಗೊಳಿಸುವುದು ಇನ್ನಷ್ಟು ಪ್ರತಿಭೆ – ತಜ್ಞತೆಗಳನ್ನು ಅಪೇಕ್ಷಿಸುತ್ತದೆ. ಕೃತಿಯಿದು ಈ ಕುರಿತಾದ ಬರಹಗಳನ್ನು ಒಳಗೊಂಡಿದೆ. ಸಾಹಿತ್ಯದ ವಿಶಿಷ್ಟ ತಜ್ಞತೆಯಿರುವ ಪೂರ್ವಸೂರಿಗಳು ಈ ಕುರಿತು ಏನೆಂದಿದ್ದಾರೆ ಎನ್ನುವುದನ್ನು ಇಲ್ಲಿ ನಿರೂಪಿಸಲಾಗಿದೆ. ಹಾಗೆಂದು ಇದು ಆ ವಿಷಯದ ಸಮಗ್ರ ಕೃತಿಯೇನೂ ಅಲ್ಲ. ಒಂದಿಷ್ಟು ಅಂಶಗಳಿವೆ ಇಲ್ಲಿ ಅಷ್ಟೇ.