ಕಲಿಸದೇ ಕಲಿಸುವ 24 ಗುರುಗಳು | Kalisade Kalisuva 24 Gurugalu
ಕಲಿಕೆ ಎಂದರೆ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಕಲಿಯುವುದಲ್ಲ. ಅದರಿಂದ ಆಚೆಗೆ ಇರುವುದನ್ನು ತಿಳಿಯುವುದು ಕಲಿಕೆ.
ಪ್ರಕೃತಿಯೇ ಮನುಷ್ಯನಿಗೆ ಸಿಲೆಬಸ್. ಅಲ್ಲಿಂದ ನಿತ್ಯ ಕಲಿಯುತ್ತಾನೆ ಮತ್ತು ಅದನ್ನು ಮರೆಯುವುದಿಲ್ಲ.
ಈ ಕೃತಿ ಪ್ರಕೃತಿಯಲ್ಲಿ ಏನನ್ನು ನೋಡಿ ಏನೇನನ್ನು ಕಲಿಯಬಹುದು ಎನ್ನುವುದನ್ನು ತೋರಿಸುತ್ತದೆ. ಎಲ್ಲವನ್ನೂ ಬಿಟ್ಟ ಅವಧೂತ ಪ್ರಕೃತಿಯ ೨೪ ವಸ್ತುಗಳಿಂದ, ಜೀವಿಗಳಿಂದ ಸುಖದ ಬದುಕಿಗೆ ಬೇಕಾದ ಅಂಶಗಳನ್ನು ಹೇಗೆಲ್ಲ ಪಡೆದ ಎನ್ನುವುದೇ ಈ ಕೃತಿಯ ವಿಶೇಷ.
ಈ ಕಿರು ಹೊತ್ತಗೆ ಓದಿ ಮುಗಿಸುವ ಹೊತ್ತಿಗೆ ನೀವು ಕಲಿಯುತ್ತೀರಿ.
- ಲೋಹಿತ ಹೆಬ್ಬಾರ್