ಕಥೆ ಬೇಕೇನ್ರೀ ಕಥೆ? | Kathe Bekenri Kathe
ಕಥೆ ಬೇಕೇನ್ರೀ ಕಥೆ?
ಇದು ನಲವತ್ತಾರು ಕಥೆಗಳ ಸಂಕಲನ.
ಇದರಲ್ಲಿ ಮೂರು ಭಾಗಗಳಿವೆ.
ಮೊದಲ ಭಾಗ – ‘ಮನುಷ್ಯ ಜಗತ್ತು’. ಮನುಷ್ಯನಂತೆ ವರ್ತಿಸುವ ಪ್ರಾಣಿಗಳ ಕಥೆಗಳಿರುವ ಭಾಗವಿದು.
ಎರಡನೆಯ ಭಾಗ ‘ಪ್ರಾಣಿ ಪ್ರಪಂಚ’. ಪ್ರಾಣಿಗಳಂತಾಡುವ ಮನುಷ್ಯರ ಕಥೆಗಳು ಇಲ್ಲಿವೆ.
ಮೂರನೆಯ ಭಾಗ – ‘ಮೂರ್ಖರ ಸಂತೆ’. ಮೂರ್ಖತನದ ಪರಮಾವಧಿಯ ಕಥೆಗಳು ಇಲ್ಲಿವೆ.
ಈ ಕೃತಿ ಪ್ರಾಚೀನ ಕಥಾಸರಿತ್ಸಾಗರದ ಪುನರವತರಣ. ಅಲ್ಲಿಂದ ಆಯ್ದ ಹನಿಗಳು ಇಲ್ಲಿವೆ. ಇದು ಅನುವಾದವಲ್ಲ. ಕಥಾಸರಿತ್ಸಾಗರದ ಕಥೆಗಳ ಪುನಾರೂಣೆ – ಅವುಗಳ ಆಧುನಿಕ ಪರಿವೇಷ.