ಕಥೆಯೆಲ್ಲ ಜೀವನ | Katheyella Jeevana
‘ಕಥೆಯೆಲ್ಲ ಜೀವನ’ ಕಥೆ ಮತ್ತು ಬದುಕಿನ ಈ ತಾದಾತ್ಮ್ಯದ ಅಭಿವ್ಯಕ್ತಿ. ಯಾವುದೋ ಕಥೆಯಲ್ಲಿ ನಮ್ಮ ಬದುಕಿರಬಹುದು ಅಥವಾ ನಮ್ಮ ಬದುಕೇ ಕಥೆಯೂ ಆಗಿರಬಹುದು.
ಕಥಾಸರಿತ್ಸಾಗರ ಈ ಕೃತಿಗೆ ಆಧಾರ. ಸೋಮದೇವನ ಆ ಕೃತಿ ಅನುಪಮತೆಯ ಮೇರು. ಅದು ನಿಜವಾದ ಅರ್ಥದ ಕಥೆಗಳ ಸಾಗರ. ಬದುಕಿನ ಸ್ಫೂರ್ತಿಯ ಆಗರವೂ ಹೌದು.
ಕ್ರಿಸ್ತಶಕ ಹನ್ನೊಂದನೆಯ ಶತಮಾನದಲ್ಲಿ ಕಾಶ್ಮೀರದ ಕವಿ ಕ್ಷೇಮೇಂದ್ರ ಸಂಸ್ಕೃತ
ಭಾಷೆಯಲ್ಲಿ ಅದನ್ನು ಮತ್ತೆ ರಚಿಸಿದ. ಅದಕ್ಕೆ ಬೃಹತ್ಕಥಾಮಂಜರಿ ಎಂದು ಹೆಸರಿಟ್ಟ. ಆಗ
ಕಾಶ್ಮೀರವನ್ನು ಆಳುತ್ತಿದ್ದುದು ಅನಂತರಾಜ. ಅವನ ರಾಣಿ ಸೂರ್ಯವತೀ.
ಶ್ರೇಷ್ಠ ಪಂಡಿತೆಯವಳು. ಅವಳಿಗೆ ಕ್ಷೇಮೇಂದ್ರನ ಆ ಕೃತಿ ಅಷ್ಟೊಂದು ಇಷ್ಟವಾಗಲಿಲ್ಲ.
ಅವಳು ಸೋಮದೇವಭಟ್ಟನಿಂದ ಸಂಸ್ಕೃತದಲ್ಲೇ ಇನ್ನೊಂದು ಕೃತಿಯನ್ನು ಬರೆಸಿದಳು.
ಅದೇ ಕಥಾಸರಿತ್ಸಾಗರ.
ಸಾವಿರ ಸಾವಿರ ಕಥೆಗಳ ಒಡಲಾದ ಆ ಕಥಾಸರಿತ್ಸಾಗರದ ಒಂದಿಷ್ಟು ಕಥೆಗಳು
ಇಲ್ಲಿವೆ. ಆ ಕಥೆಗಳು ಹೇಳಲು ಹೊರಟಿದ್ದರ ಸೂಚನೆಯೂ ಜೊತೆಗಿದೆ. ಹ್ಞಾ, ಅದನ್ನೇ ಆ ಕಥೆ ಹೇಳಿದೆ ಎಂದೇನಲ್ಲ. ನಿಮಗೆ ಅದರಲ್ಲಿ ಇನ್ನೇನೋ ಒಂದೂ ಹೊಳೆಯಬಹುದು. ಅದು ಕಥೆಯ ಶಕ್ತಿ.