ಮಹಾನಂದಿ | Mahanandi (Kannada & English)
ಸಂತಮಹಾನಂದಿಯ ಭೂಮವ್ಯಕ್ತಿತ್ವವನ್ನು ಕಿರಿದಾಗಿ ಹಿಡಿದಿಡುವ ಸಾಹಸವಿದು ಅಲ್ಲಿಗೆ ಸಲ್ಲುವ, ಆದರೆ ಇಲ್ಲಿನವರಿಗಾಗಿ ಇಲ್ಲಿಗೂ, ಕಾಲದ ಮಹಾಭಿಯಾನದ ಕೆಲಸಮಯ ಸಂದ ಚೇತನವದು. ಸಾಮಾನ್ಯ ಕಣ್ಣಿಗೂ ಅಸಾಮಾನ್ಯತೆಯ ಅನುಭವವಾಗದಿದ್ದರೂ ಅರಿವಾಗಿಸಿದ ವ್ಯಕ್ತಿತ್ವವದು. ಪ್ರೇರಣೆಯೊಂದರ ಮೂಲಕ, ಸನ್ನಿಧಿಯ ಇರುವಿಕೆಯ ಮೂಲಕ ಮಹತ್ಕಾರ್ಯವೊಂದನ್ನು ಆಗಮಾಡಿದ ಅನುಪಮತೆಯದು.